ಮಂಗಳೂರು : ಅಕ್ಟೋಬರ್ 10 ರಿಂದ ನವರಾತ್ರಿ ಆರಂಭವಾಗುತ್ತಿದ್ದು ಅಕ್ಟೋಬರ್5 ರಂದು ಸಲ್ಮಾನಖಾನ ನಿರ್ಮಿತ “ಲವ್ ರಾತ್ರಿ” ಈ ಚಲನಚಿತ್ರವು ಬಿಡುಗಡೆಯಾಗುತ್ತಿದೆ. ಈ ಚಲನಚಿತ್ರಕ್ಕೆ ಉದ್ದೇಶಪೂರ್ವಕವಾಗಿ “ಲವ್ ರಾತ್ರಿ” ಎಂದು ಹಿಂದೂಗಳ “ನವರಾತ್ರಿ” ಉತ್ಸವದ ಮೇಲೆ ಹೆಸರಿಸಲಾಗಿದೆ. ಕಾರಣವೆಂದರೆ ಹಿಂದೂಗಳು ಅದನ್ನು ವಿರೋಧಿಸುವರು ಮತ್ತು ಚರ್ಚೆ ನಿರ್ಮಾಣವಾಗಿ ಚಲನಚಿತ್ರದ ಹಣಗಳಿಕೆಯು ಅಧಿಕವಾಗುವುದು. ‘ಲವ್‌ರಾತ್ರಿ’ ಚಲನ ಚಿತ್ರದ ಟ್ರೇಲರ್ ನಲ್ಲಿಯೂ ‘ಅವಳನ್ನು ಕಳುಹಿಸಲು ನಿನ್ನ ಬಳಿ 9ಹಗಲು ಮತ್ತು 9 ರಾತ್ರಿ ಇವೆ. ಎಂಬ ಸಂಭಾಷಣೆ ಇರುವುದರಿಂದ ‘ಹಿಂದೂಗಳ ಧಾರ್ಮಿಕ ಉತ್ಸವಗಳು ಪ್ರೇಮಪ್ರಕರಣಗಳನ್ನು ಮಾಡಲಿಕ್ಕಾಗಿಯೇ ಇರುತ್ತವೆ’. ಎಂಬ ತಪ್ಪು ಸಂದೇಶವು ಹೋಗುತ್ತಿದೆ. ಇದು ಅತ್ಯಂತ ಖಂಡನೀಯವಾಗಿದೆ. ಚಲನಚಿತ್ರದ ಹೆಸರನ್ನು ಬದಲಾಯಿಸಬೇಕು, ಸದ್ಯ ಇದೊಂದೇ ಬೇಡಿಕೆಯನ್ನು ಮಾಡುತ್ತಿದ್ದೇವೆ; ಆದರೆ ಈ ಚಲನಚಿತ್ರ ಪ್ರದರ್ಶನವಾದ ನಂತರ ಅದರಲ್ಲಿ ಯಾವುದಾದರು ಅಕ್ಷೇಪಾರ್ಹ ಪ್ರಸಂಗ ಅಥವಾ ಸಂಭಾಷಣೆ ಇದ್ದಲ್ಲಿ ತೀವ್ರ ಪ್ರತಿಭಟನೆಯನ್ನು ಮಾಡುವೆವು, ಎಂಬ ಸಂಕೇತವನ್ನು ಸಹ ಈ ಸಮಯದಲ್ಲಿ ನೀಡಲಾಯಿತು. ಚಲನಚಿತ್ರದ ಹೆಸರನ್ನು ಬದಲಾಯಿಸಬೇಕೆಂದು ಸೆನ್ಸಾರ್ ಬೋರ್ಡ ಮತ್ತು ಸರ್ಕಾರಕ್ಕೆ ಮನವಿಯನ್ನು ಕೊಡಲಾಯಿತು.
ಕೇವಲ ಆಸ್ಸಾಂನಲ್ಲಿನ ಬಾಂಗ್ಲಾದೇಶಿ ನುಸುಳುಖೋರರಷ್ಟೇ ಅಲ್ಲ; ಸಂಪೂರ್ಣ ದೇಶದಾದ್ಯಂತ ಬಾಂಗ್ಲಾದೇಶಿ ನುಸುಳುಖೋರ ಮುಸಲ್ಮಾನರನ್ನು ದೇಶದಿಂದ ಹೊರದಬ್ಬಿ ಎಂದು ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ನಡೆದ ರಾಷ್ಟ್ರೀಯ ಹಿಂದೂ ಆಂದೋಲನದಲ್ಲಿ ಆಗ್ರಹಿಸಲಾಯಿತು.
ಅಸ್ಸಾಂನಲ್ಲಿ ಬಾಂಗ್ಲಾದೇಶಿ ನುಸುಳುಖೋರ ಯಾರು ಮತ್ತು ಮೂಲ ಆಸ್ಸಾಮಿ ಯಾರು, ಇದರ ಮಾಹಿತಿಯನ್ನು ನೀಡುವ ‘ನ್ಯಾಶನಲ್ ರಿಜಿಸ್ಟರ್ ಆಫ್ ಸಿಟಿಝನ್’ನ ಪ್ರಾರ್ಥಮಿಕ ಸೂಚಿಯು ಬಿಡುಗಡೆಯಾಯಿತು ಮತ್ತು ಕಾಂಗ್ರೆಸ್ ಸಹಿತ ಅನೇಕ ರಾಜಕೀಯ ಪಕ್ಷಗಳು ಗೊಂದಲವನ್ನುಂಟುಮಾಡಲು ಆರಂಭಿಸಿದ್ದಾರೆ. ಕಾಶ್ಮೀರದಿಂದ ಹೊರ ದಬ್ಬಲ್ಪಟ್ಟ 4.5 ಲಕ್ಷ ಹಿಂದೂಗಳು ಇನ್ನೂ ಕೂಡ ಕರುಣಾಜನಕ ಪರಿಸ್ಥಿತಿಯಲ್ಲಿ ಜೀವನವನ್ನು ಸಾಗಿಸುತ್ತಿದ್ದಾರೆ. ಕಳೆದ 28 ವರ್ಷಗಳಿಂದ ಅವರಿಗೆ ಕಾಶ್ಮೀರದಲ್ಲಿ ಪುನರ್ವಸತಿಯನ್ನು ನೀಡಲಾಗಿಲ್ಲ, ಇದರ ಬಗ್ಗೆ ಯಾರೂ ಮಾತನಾಡುವುದಿಲ್ಲ; ಕೇವಲ ಆಸ್ಸಾಂನಲ್ಲಿನ ಬಾಂಗ್ಲಾದೇಶಿ ನುಸುಳುಖೋರರು ಮಾತ್ರವಲ್ಲ ಸಂಪೂರ್ಣ ದೇಶದಾದ್ಯಂತ ಬಾಂಗ್ಲಾದೇಶಿ, ಪಾಕಿಸ್ತಾನಿ ಮತ್ತು ರೊಹಿಂಗ್ಯಾ ಮುಸಲ್ಮಾನ ನುಸುಳುಖೋರರನ್ನು ಸಹ ಕೂಡಲೇ ದೇಶದಿಂದ ಹೊರಹಾಕಿ, ಎಂಬ ಬೇಡಿಕೆಯನ್ನು ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ. ಚಂದ್ರ ಮೊಗೇರ ಇವರು ಮಾಡಿದರು.
ಕೊಲ್ಯ ಶ್ರೀ ಮೂಕಾಂಬಿಕಾ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಶ್ರೀ. ಮಧುಸೂಧನ್ ಅಯ್ಯರ್ ಮಾತನಾಡುತ್ತಾ, ಉತ್ತರಪ್ರದೇಶದಲ್ಲಿನ ದೇವರಿಯಾದಲ್ಲಿ ಶಾಲೆಯ ಹೆಸರನ್ನು ಬದಲಾಯಿಸಿ ಅದನ್ನು ‘ಇಸ್ಲಾಮಿಯಾ ಪ್ರೈಮರಿ ಸ್ಕೂಲ್’ ಎಂದು ಮಾಡಲಾಗಿದೆ, ಹಾಗೆಯೇ ಇತರ 4ಸರಕಾರ ಶಾಲೆಗಳಲ್ಲಿ ಶುಕ್ರವಾರ ರಜೆಯನ್ನು ಘೋಷಿಸಲಾಗಿದೆ, ಇದು ಭಾರತವನ್ನು ವ್ಯವಸ್ಥಿತವಾಗಿ ‘ಇಸ್ಲಾಮೀಕರಣ’ ಮಾಡುವ ಷಡ್ಯಂತ್ರದ ಒಂದು ಭಾಗವಾಗಿದೆ. ಆದ್ದರಿಂದ ಸರ್ಕಾರವು ದೇಶದಾದ್ಯಂತ ಈ ನಿಟ್ಟಿನಲ್ಲಿ ಎಲ್ಲಾ ಶಾಲೆಗಳಲ್ಲಿ ತನಿಖೆಯನ್ನು ಮಾಡಬೇಕು ಮತ್ತು ಭಾರತದ ಇಸ್ಲಾಮೀಕರಣವನ್ನು ತಡೆಗಟ್ಟಲು ಕಠೋರ ಕ್ರಮವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕೊಲ್ಯ ಶ್ರೀ ಮೂಕಾಂಬಿಕಾ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಶ್ರೀ. ಮಧುಸೂಧನ್ ಅಯ್ಯರ್, ಧರ್ಮಪ್ರೇಮಿಗಳಾದ ಶ್ರೀ. ದಯಾನಂದ್, ಶ್ರೀ ಸತೀಶ್, ಶ್ರೀ. ಉದಯ ಕುಮಾರ್, ಶ್ರೀ. ಲೋಕೇಶ್ ಕುತ್ತಾರ್, ಶ್ರೀ. ವೇಣುಗೋಪಾಲ್ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English