ನವೆಂಬರ್ 16ರಿಂದ ಆಳ್ವಾಸ್ ನುಡಿಸಿರಿ 2018

9:34 PM, Monday, August 27th, 2018
Share
1 Star2 Stars3 Stars4 Stars5 Stars
(No Ratings Yet)
Loading...

Mohan-Alvaಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಕನ್ನಡ ನಾಡು-ನುಡಿ-ಸಂಸ್ಕೃತಿಯ  ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ಹದಿನ್ಯೆದನೇ ವರ್ಷದ ಸಮ್ಮೇಳನವನ್ನು ನವೆಂಬರ ತಿಂಗಳ 16, 17 ಮತ್ತು 18ನೇ ಮೂರು ದಿನಗಳ ಕಾಲ ನಡೆಯಲಿದೆ.

ನವೆಂಬರ 16 ಬೆಳಗ್ಗೆ ಸಮ್ಮೇಳನವು ಉದ್ಘಾಟನೆಗೊಳ್ಳಲಿದ್ದು, ನವೆಂಬರ 18ನೇ ತಾರೀಕು ಮಧ್ಯಾಹ್ನ ಸಮ್ಮೇಳನವು ಸಂಪನ್ನಗೊಳ್ಳಲಿದೆ.

ಸಮ್ಮೇಳನದ ರೂಪುರೇಖೆಗಳ ಕುರಿತು ಚರ್ಚೆಗಳು ನಡೆಯುತ್ತಿದ್ದು ಶೀಘ್ರವಾಗಿ ಅಂತಿಮ ಸ್ಪರ್ಷ ನೀಡಲಾಗುವುದು. ಅರ್ಥವತ್ತಾಗುವಂತೆ ಹಾಗೂ ಆಕರ್ಷಕವಾಗುವಂತೆ ಸಮ್ಮೇಳನವನ್ನು ಆಯೋಜಿಸಲು ಪೂರ್ವತಯಾರಿಗಳು ನಡೆಯುತ್ತಿವೆ. ಎಂದಿನಂತೆ ಈ ವರ್ಷವೂರತ್ನಾಕರವರ್ಣಿ ವೇದಿಕೆಯ ನುಡಿಸಿರಿ ಸಭಾಂಗಣದಲ್ಲಿ ಸಮ್ಮೇಳನವು ಜರಗಲಿದೆ.

ಪ್ರತಿನಿಧಿಯಾಗ ಬಯಸುವ ಕನ್ನಡಾಭಿಮಾನಿಗಳು 100 ರೂ.ಪ್ರತಿನಿಧಿ ಶುಲ್ಕ ನೀಡಿ ಸದಸ್ಯರಾಗಬಹುದು. ವಿದ್ಯಾರ್ಥಿಗಳಿಗೆ ಸಮ್ಮೇಳನದಲ್ಲಿ ಉಚಿತ ಪ್ರವೇಶವಿದೆ. ಸಮ್ಮೇಳನದ ಯಶಸ್ಸಿಗಾಗಿ ಸಿದ್ಧತೆಗಳು ನಡೆಯುತ್ತಿದ್ದು ಕನ್ನಡ ನಾಡು-ನುಡಿ-ಸಂಸ್ಕøತಿ ಪ್ರಿಯಕನ್ನಡ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಆಳ್ವಾಸ್ ನುಡಿಸಿರಿ 2018 ಅನ್ನು ಯಶಸ್ವಿಗೊಳಿಸಬೇಕೆಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English