ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ನಗರಸಭೆ, ಪುತ್ತೂರು ನಗರಸಭೆ ಹಾಗೂ ಬಂಟ್ವಾಳ ಪುರಸಭೆಗೆ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ.
ಮುಂಜಾನೆಯಿಂದಲೇ ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನದಲ್ಲಿ ಭಾಗಿಯಾಗಿದ್ದಾರೆ. ಉಳ್ಳಾಲ ನಗರಸಭೆಯ 31 ವಾರ್ಡುಗಳಿಗೆ 102 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇಲ್ಲಿ 44132 ಮತದಾರರಿದ್ದು, 43 ಮತಗಟ್ಟೆಗಳಲ್ಲಿ 43 ಇವಿಎಂ ವ್ಯವಸ್ಥೆ ಮಾಡಲಾಗಿದೆ. 172 ಮತಗಟ್ಟೆ ಸಿಬ್ಬಂದಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಂಟ್ವಾಳ ಪುರಸಭೆಯ 27 ವಾರ್ಡ್ಗಳಿಗೆ 71 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇಲ್ಲಿ 34102 ಮತದಾರರಿದ್ದು, 32 ಮತಗಟ್ಟೆಗಳಲ್ಲಿ 32 ಇವಿಎಂ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ 128 ಮತಗಟ್ಟೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ನು ಪುತ್ತೂರು ನಗರಸಭೆಯ 31 ವಾರ್ಡುಗಳಿಗೆ 77 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇಲ್ಲಿ 39745 ಮತದಾರರು ಇದ್ದು, 41 ಮತಗಟ್ಟೆಗಳಲ್ಲಿ 41 ಇವಿಎಂ ವ್ಯವಸ್ಥೆ ಮಾಡಲಾಗಿದೆ. 164 ಮತಗಟ್ಟೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
Click this button or press Ctrl+G to toggle between Kannada and English