ಮಂಗಳೂರು: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಆವೃತ್ತಿ ಏಷ್ಯನ್ ಗೇಮ್ಸ್ನಲ್ಲಿ ಮಂಗಳೂರಿನ ಪೂವಮ್ಮ ದೇಶಕ್ಕೆ ಕೀರ್ತಿ ತಂದಿದ್ದು, ಕ್ರೀಡಾಕೂಟದ ಮಹಿಳೆಯರ 4×400 ಮೀಟರ್ ರಿಲೆಯಲ್ಲಿ ಭಾರತಕ್ಕೆ ಚಿನ್ನವನ್ನ ತಂದುಕೊಟ್ಟಿದ್ದಾರೆ.
ಅವರು ಚಿನ್ನದ ಪದಕ ಗೆಲ್ಲುತ್ತಿದ್ದಂತೆ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ಮನೆಯವರು ಒಬ್ಬರಿಗೊಬ್ಬರು ಸಿಹಿ ಹಂಚಿ ಸಂಭ್ರಮಪಟ್ಟಿದ್ದಾರೆ. ಪೂವಮ್ಮ ತಂದೆ ರಾಜು, ತಾಯಿ ಜಾನಕಿ, ತಮ್ಮ ಮಂಜು, ತಂಗಿ ಲಿಖಿತ ಅವರು ಟಿವಿಯಲ್ಲಿ ಪೂವಮ್ಮ ಮಾಡಿರುವ ಸಾಧನೆ ನೋಡಿ ಸಂಭ್ರಮ ಪಟ್ಟಿದ್ದಾರೆ.
ಇದೇ ವೇಳೆ ದೂರವಾಣಿ ಕರೆ ಮಾಡಿ ಹಲವರು ಶುಭ ಹಾರೈಕೆ ಮಾಡಿದ್ದಾರೆ. 4×400 ಮೀಟರ್ ಮಹಿಳಾ ರಿಲೆಯಲ್ಲಿ ಕರ್ನಾಟಕದ ಪೂವಮ್ಮ, ಹಿಮಾದಾಸ್, ಲಕ್ಷ್ಮಿಬಾಯ್ ಗಾಯಕ್ವಾಡ್, ವಿಸ್ಮಯ ತಂಡ 3.28.72 ಸೆಕೆಂಡಿನಲ್ಲಿ ಗುರಿಯನ್ನು ಕ್ರಮಿಸಿ ಚಿನ್ನವನ್ನು ಗೆದ್ದುಕೊಂಡಿದೆ.
Click this button or press Ctrl+G to toggle between Kannada and English