ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಕುಕ್ಕುತ್ತಡ್ಕ ನಿವಾಸಿ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮಹಮೂದ್ (55) ಹೃದಯಾಘಾತದಿಂದ ಸಾವನ್ನಪ್ಪಿದ ವ್ಯಕ್ತಿ.ಕುಕ್ಕುತ್ತಡ್ಕ ಮೋನು ಬ್ಯಾರಿ ಅವರ ಪುತ್ರರಾಗಿರುವ ಮಹಮೂದ್ ಕಳೆದ 18 ವರ್ಷಗಳಿಂದ ಗಲ್ಫ್ನಲ್ಲಿ ಉದ್ಯೋಗದಲ್ಲಿದ್ದರು. ಅವರು ಇತ್ತೀಚೆಗಷ್ಟೇ ರಜೆಯಲ್ಲಿ ಊರಿಗೆ ಬಂದು ಸೌದಿಗೆ ಮರಳಿದ್ದು, ಸೌದಿ ಅರೇಬಿಯಾದ ರಿಯಾದ್ ನಲ್ಲಿ ಸಾವನ್ನಪ್ಪಿದ್ದಾರೆ.
Click this button or press Ctrl+G to toggle between Kannada and English