ಧರ್ಮಸ್ಥಳ : ಕ್ರಾಂತಿಕಾರಿ ರಾಷ್ಟ್ರಸಂತ ತರುಣ ಸಾಗರ ಮುನಿ ಮಹಾರಾಜರು ಸಮಾಧಿ ಮರಣ ಹೊಂದಿದ ವಿಚಾರ ತಿಳಿಯಿತು.
2007 ರಲ್ಲಿ ಧರ್ಮಸ್ಥಳದಲ್ಲಿ ನಡೆದ ಭಗವಾನ್ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಪೂಜ್ಯರನ್ನು ಇಲ್ಲಿಗೆ ಆಮಂತ್ರಿಸಿ ಅವರ ಸೇವೆ ಮಾಡುವ ಅವಕಾಶ ನಮಗೆ ದೊರಕಿತ್ತು.
ಜೈನ ಧರ್ಮದ ಬಗ್ಯೆ ಆಳವಾದ ಅಧ್ಯಯನ ಮಾಡಿ ಅವರು ಉತ್ತಮ ಸಮನ್ವಯ ದೃಷ್ಟಿಯಿಂದ ಮಂಗಲ ಪ್ರವಚನ ನೀಡುತ್ತಿದ್ದರು. ಪೂಜ್ಯರಿಂದ ಸರ್ವ ಧರ್ಮಿಯರೂ ಪ್ರಭಾವಿತರಾಗಿದ್ದು ವಾಸ್ತವಿಕವಾಗಿ ತಮ್ಮ ಜೀವನದಲ್ಲಿ ಧರ್ಮವನ್ನು ಅನುಷ್ಠಾನಗೊಳಿಸುವ ಬಗ್ಯೆ ಅವರು ಮಾರ್ಗದರ್ಶನ ನೀಡುತ್ತಿದ್ದರು.
ಎಲ್ಲರೂ ಧರ್ಮದ ಮೂಲ ತತ್ವಗಳ ಬಗ್ಯೆ ಹೇಳುತ್ತಾರೆ. ಆದರೆ ಅದನ್ನು ನಿಜ ಜೀವನದಲ್ಲಿ ಅಳವಡಿಸುವ ಬಗ್ಯೆ ಪ್ರೇರಣೆ ನೀಡುವುದಿಲ್ಲ. ಧರ್ಮ ಪ್ರಭಾವನೆ ಜೊತೆಗೆ ಸಾಂಸಾರಿಕ ಹಾಗೂ ಸಾಮಾಜಿಕ ಸಮಸ್ಯೆಗಳ ಪರಿಹಾರದ ಬಗ್ಯೆಯೂ ನಿರ್ಭಯವಾಗಿ ಪೂಜ್ಯರು ಸದಾ ಮಾರ್ಗದರ್ಶನ ನೀಡುತ್ತಿದ್ದರು.
ಅವರ ಮಂಗಲ ಪ್ರವಚನ, ಮಾರ್ಗದರ್ಶನ, ಪ್ರೇರಣೆ ಸದಾ ನಮ್ಮ ಸ್ಮರಣೆಯಲ್ಲಿದೆ ಎಂದು ಡಿ. ವೀರೇಂದ್ರ ಹೆಗ್ಗಡೆಯವರು ಸಂತಾಪ ವ್ಯಕ್ತ ಪಡಿಸಿದ್ದಾರೆ .
Click this button or press Ctrl+G to toggle between Kannada and English