ಮಂಗಳೂರು: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಕನ್ಯಾಡಿಯಲ್ಲಿ ರಾಷ್ಟ್ರೀಯ ಧರ್ಮಸಂಸದ್ ಪ್ರಯುಕ್ತ ವೈಭವದ ಶೋಭಯಾತ್ರೆ ನಡೆಯಿತು.
ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಸ್ವಾಮೀಜಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕದ ದಶಮಾನೋತ್ಸವ ಪ್ರಯುಕ್ತ ಈ ರಾಷ್ಟ್ರೀಯ ಧರ್ಮಸಂಸದ್ ನಡೆಯುತ್ತಿದೆ. ಇದರಂಗವಾಗಿ ಉಜಿರೆಯಿಂದ ಕನ್ಯಾಡಿಯವರೆಗೆ ಶೋಭಯಾತ್ರೆ ನಡೆಯಿತು.
ಧರ್ಮಸಂಸದ್ಗೆ ಸಾಧುಸಂತರು, ಯತಿವರ್ಯರು , ಮಹಾಮಂಡಲೇಶ್ವರರು, ಧರ್ಮ ಪೀಠಾಧೀಶ್ವರರು ಸೇರಿದಂತೆ ಸಾವಿರಾರು ಮಂದಿ ಶೋಭಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಇಂದು ಬೆಳಗ್ಗೆ ಧರ್ಮಸಂಸದ್ ಉದ್ಘಾಟನೆಗೊಳ್ಳಲಿದ್ದು , ರಾತ್ರಿಯವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
Click this button or press Ctrl+G to toggle between Kannada and English