ಗೌರಿ ಮೆಮೋರಿಯಲ್ ಟ್ರಸ್ಟ್ ನಿಂದ ಗೌರಿ ದಿನಾಚರಣೆ..!

12:52 PM, Wednesday, September 5th, 2018
Share
1 Star2 Stars3 Stars4 Stars5 Stars
(No Ratings Yet)
Loading...

gouri-lankeshಬೆಂಗಳೂರು: ಗೌರಿಲಂಕೇಶ್ ಹತ್ಯೆಯಾಗಿ ಒಂದು ವರ್ಷವಾದ ಹಿನ್ನೆಲೆ ಗೌರಿ ಲಂಕೇಶ್ ಬಳಗ ಮತ್ತು ಗೌರಿ ಮೆಮೋರಿಯಲ್ ಟ್ರಸ್ಟ್ ನಿಂದ ಗೌರಿ ದಿನಾಚರಣೆ ಆಚರಿಸಲಾಯ್ತು.

ಗೌರಿ ದಿನಾಚರಣೆ ಅಂಗವಾಗಿ ಟಿಆರ್ ಮಿಲ್ ಸಮೀಪದ ಲಿಂಗಾಯಿತ/ ವಿರಶೈವ ರುದ್ರಭೂಮಿಯಲ್ಲಿರುವ ಗೌರಿಯ ಸಮಾಧಿ ಬಳಿ ಗೌರಿ ಅಮರ್ ರಹೇ ಶೀರ್ಷಿಕೆಯಡಿ ಅಭಿವ್ಯಕ್ತಿ ಹತ್ಯೆ ವಿರೋಧಿ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು.

ಕಾರ್ಯಕ್ರಮದಲ್ಲಿ ಸ್ವಾಮಿ ಅಗ್ನಿವೇಶ್, ನಟ ಪ್ರಕಾಶ್ ರೈ, ಸಾಹಿತಿ ವಿಜಯಮ್ಮ, ವಿಚಾರವಾದಿ ಬಿಟಿ ಲಲಿತಾನಾಯ್ಕ್, ಸೇರಿದಂತೆ ಗೌರಿ ಲಂಕೇಶ್ ಅಭಿಮಾನಿ ಬಳಗದ ಸದಸ್ಯರು ಭಾಗಿಯಾಗಿದ್ರು. ಇದೇ ವೇಳೆ ಗೌರಿ ಸಮಾಧಿ ಮೇಲೆ ಇಲ್ಲಿ ಬೀಜ ಬಿತ್ತಿ ಜಗದೆಲ್ಲೆಡೆ ಚಿಗುರಿದೆ ನೋಡ ಎಂಬ ಬರಹವನ್ನ ಕೂಡ ಬಿಡುಗಡೆ ಮಾಡಲಾಯ್ತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English