ಭಾರತದಾದ್ಯಂತ ಶಿಕ್ಷಕರ ದಿನಾಚರಣೆ..ಶುಭ ಕೋರಿದ ಪ್ರಧಾನಿ, ರಾಷ್ಟ್ರಪತಿಗಳು!

3:07 PM, Wednesday, September 5th, 2018
Share
1 Star2 Stars3 Stars4 Stars5 Stars
(No Ratings Yet)
Loading...

narendra-modiನವದೆಹಲಿ: ಭಾರತದಾದ್ಯಂತ ಇಂದು ಶಿಕ್ಷಕರ ದಿನ ಆಚರಿಸಲಾಗುತ್ತಿದೆ. ಅಜ್ಞಾನದಿಂದ ಜ್ಞಾನದ ಬೆಳಕಿನೆಡೆಗೆ ಕೊಂಡೊಯ್ಯುವ ಗುರುಗಳನ್ನು ಇಂದು ಪ್ರತಿಯೊಬ್ಬರೂ ಸ್ಮರಿಸಿ ಪೂಜಿಸುತ್ತಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಶಿಕ್ಷಕರ ದಿನದ ಶುಭಾಶಯವನ್ನು ಟ್ವಿಟ್ಟರ್ ಮೂಲಕ ಹೇಳಿದ್ದಾರೆ.

ಶಿಕ್ಷಕರ ದಿನದ ಈ ವಿಶೇಷ ಸಂದರ್ಭದಲ್ಲಿ ಶಿಕ್ಷಕ ಸಮುದಾಯಕ್ಕೆ ಶುಭ ಕೋರುತ್ತಿದ್ದೇನೆ. ಯುವಕರ ಮನಸ್ಸನ್ನು ರೂಪಿಸುವಲ್ಲಿ ಹಾಗೂ ದೇಶವನ್ನು ಕಟ್ಟುವಲ್ಲಿಯೂ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಭಾರತದ ಮಾಜಿ ರಾಷ್ಟ್ರಪತಿ ಹಾಗೂ ಪ್ರಸಿದ್ಧ ಶಿಕ್ಷಕ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ತಲೆಬಾಗುವೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಶಿಕ್ಷಕರ ಮಹತ್ವ ಸಾರುವ ವಿಡಿಯೋವನ್ನು ಅವರು ಟ್ವಿಟ್ಟರ್ನಲ್ಲಿ ಸಹ ಹಾಕಿಕೊಂಡಿದ್ದಾರೆ.

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶಿಕ್ಷಕರ ದಿನದ ಶುಭಾಶಯ ಕೋರಿದ್ದು, ಶಿಕ್ಷಕರ ದಿನವಾದ ಇಂದು ನಾನು ಡಾ. ಸರ್ವಪಕಲ್ಲಿ ರಾಧಾಕೃಷ್ಣನ್ ಅವರಿಗೆ ನಮಿಸುವೆ ಹಾಗೂ ಎಲ್ಲ ಶಿಕ್ಷಕರು ಹೃತ್ಪೂರ್ವಕವಾಗಿ ಶುಭ ಕೋರುವೆ. ನಮ್ಮ ಶ್ರೇಷ್ಠ ಗುರುಗಳು ದೇಶಕಟ್ಟುವಲ್ಲಿ ಸಹಕಾರಿಯಾಗುವ ಕಾರ್ಯ ಮುಂದುವರೆಸಲಿ ಹಾಗೂ ಜಗತ್ತಿನಲ್ಲಿ ಜ್ಞಾನ, ಶಾಂತಿ, ಸೌಹಾರ್ದತೆ ನೆಲೆಸುವಂತೆ ಮಾಡಲಿ ಎಂದು ಟ್ವೀಟ್ ಮಾಡಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English