ಮಂಗಳೂರು: ವೇತನ ಅನುದಾನ ಬಿಡುಗಡೆಗೆ ಅಗ್ರಹಿಸಿ ನಿನ್ನೆ ಧರಣಿ ನಡೆಸಿದ ಆರ್ಎಂಎಸ್ಎ ಶಿಕ್ಷಕರು ಇಂದು ಶಿಕ್ಷಕರ ದಿನಾಚರಣೆಯ ನಡುವೆಯೂ ಪ್ರತಿಭಟನೆ ಮುಂದುವರಿಸಿದ್ದಾರೆ.
ಬೆಳ್ತಂಗಡಿ ಕ್ಷೇತ್ರ ಶಿಕ್ಣಣಾಧಿಕಾರಿ ಕಚೇರಿ ಮುಂದೆ ನಿನ್ನೆ ಧರಣಿ ಆರಂಭಿಸಿದ್ದ ಶಿಕ್ಷಕರು ಬೇಡಿಕೆ ಈಡೇರದಿದ್ದರೆ ಶಿಕ್ಷಕರ ದಿನಾಚರಣೆಯಂದು ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದರು.
ಅದರಂತೆ ಬೆಳ್ತಂಗಡಿ ಶಿಕ್ಷಣಾಧಿಕಾರಿ ಕಚೇರಿ ಮುಂದೆ 24 ಶಿಕ್ಷಕರಿಂದ ಧರಣಿ ನಡೆಯುತ್ತಿದ್ದು, ಶಿಕ್ಷಕರ ದಿನಾಚರಣೆಯನ್ನು ಪ್ರತಿಭಟನಾ ಸ್ಥಳದಲ್ಲಿ ಸಾಂಕೇತಿಕವಾಗಿ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ.
Click this button or press Ctrl+G to toggle between Kannada and English