ಉಡುಪಿ: ರಾಜ್ಯದಲ್ಲಿ ಸುರಿದಿದ್ದ ಮಹಾಮಳೆಗೆ ಕೊಡಗಿನಲ್ಲಿ ಭಾರೀ ಹಾನಿಯಾಗಿದ್ದರ ಜೊತೆಗೆ ಅದರ ಕಾವು ಕರಾವಳಿಗೂ ತಟ್ಟಿ ಮೀನು ಉದ್ಯಮಕ್ಕೆ ಭಾರೀ ಪೆಟ್ಟು ಬಿದ್ದಿತ್ತು.
ಹಲವಾರು ದಿನಗಳ ಕಾಲ ಸಮುದ್ರಕ್ಕೆ ಮೀನಿನ ದೋಣಿಗಳು ಇಳಿಯದೇ ಇದ್ದಿದ್ದರಿಂದ ಕರಾವಳಿಯ ಮೀನು ಪ್ರಿಯರಿಗೆ ಮೀನಿನ ಕೊರತೆ ಉಂಟಾಗಿತ್ತು. ಆದರೆ ಇದೀಗ ಉಡುಪಿಯ ಹೆಜ ಮಾಡಿಯ ಕೋಡಿಯಲ್ಲಿ ಮೀನಿನ ಸುಗ್ಗಿ ಶುರುವಾಗಿದೆ.
ಹೌದು, ಉಡುಪಿಯ ಹೆಜಮಾಡಿ ಕೋಡಿ ಕಡಲ ಕಿನಾರೆಯಲ್ಲಿ ಮೀನುಗಳು ಅಲೆಗಳ ಜೊತೆಗೆ ಸಮುದ್ರ ಕಿನಾರೆಗೆ ಅಪ್ಪಳಿಸಿಸುತ್ತಿವೆ. ಈ ರೀತಿಯಾಗಿ ಗೋಲಯಿ ಮೀನುಗಳ ರಾಶಿ ದಡ ಸೇರುತ್ತಿದೆ. ಇದನ್ನರಿತ ನಾಗರಿಕರು ಟೆಂಪೋಗಳನ್ನು ತಂದು ಮೀನು ಕೊಂಡೊಯ್ಯುತ್ತಿದ್ದರೆ, ಇನ್ನು ಕೆಲವರು ಟಬ್ಗಳನ್ನು ಬಳಸಿ ಮನೆಗೆ ಮೀನು ಕೊಂಡೊಯ್ಯುತ್ತಿದ್ದಾರೆ. ಹೀಗಾಗಿ ಕಿನಾರೆಯಲ್ಲಿ ನೂಕು ನುಗ್ಗಲು ಉಂಟಾಗಿದೆ.
Click this button or press Ctrl+G to toggle between Kannada and English