ಮಂಗಳೂರು : ಪ್ರಮುಖ ಶೈಕ್ಷಣಿಕ ಸಂಸ್ಥೆಗಳಾದ ಸಂತ ಆಗ್ನೆಸ್ ಕಾಲೇಜು, ಸಂತ ಅಲೋಶಿಯಸ್ ಕಾಲೇಜು, ರೋಶನಿ ನಿಲಯ ಮತ್ತು ಅನೇಕ ಸಾಮಾಜಿಕ ಕಳಕಳಿಯುಳ್ಳ ನಾಗರೀಕರು ಮತ್ತು ಲೋಕೋಪಕಾರಿಗಳ ಬೆಂಬಲದೊಂದಿಗೆ, ಸುಶೆಗ್ ಚ್ಯಾರಿಟೇಬಲ್ ಟ್ರಸ್ಟ್‌ನ ಆಶ್ರಯದಲ್ಲಿ ಸ್ಥಾಪಿತವಾದ ಮಂಗಳೂರಿನ ಆತ್ಮಹತ್ಯೆ ಲೈಫ್‌ಲೈನ್ ಅಕ್ಟೋಬರ್ 2017 ರಂದು ಕಾರ್ಯಚರಣೆಗೆ ಬಂದಿತು.
ಆತ್ಮಹತ್ಯೆ ತಡೆಗಟ್ಟುವಿಕೆ, ಮಾನಸಿಕ ಆರೋಗ್ಯದ ವಿಕಾಸ, ಜಾಗೃತಿ ಮೂಡಿಸುವುದು, ಸಮಾಜಿಕ ಜಾಗೃತಿ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಸಾಹಿತ್ಯ ಪ್ರಕಟನೆ, ಸ್ವಯಂ ಸೇವಕರ ತರಬೇತಿ ಈ ಸುಸಾಯ್ಡ್ ಲೈಫ್ ಲೈನ್‌ನ ಉದ್ದೇಶಗಳಾಗಿವೆ. ತರಬೇತಿ ಪಡೆದ 25 ಸ್ವಯಂ ಸೇವಕರು ೨೪ ಗಂಟೆ ವಾರದ 7 ದಿನಗಳಲ್ಲೂ ಕರೆಗಳಿಗೆ ಸ್ಪಂದಿಸುತ್ತಾರೆ. ಆತ್ಮಹತ್ಯೆ ಲೈಫ್‌ಲೈನ್ (0824) 2983444 ಕಾರ್ಯರಂಭಗೊಂಡ ಮೇಲೆ ೬೦ಕ್ಕೂ ಹೆಚ್ಚು ಕರೆಮಾಡಿದವರಿಗೆ ಭರವಸೆಯ ಕಿರಣವಾಗಿದೆ.
ಲೈಫ್‌ಲೈನ್ ತರಬೇತಿ ತಜ್ಞರು ಮಂಗಳೂರು ಮತ್ತು ಅದರ ಸುತ್ತಮುತ್ತಲಿನ ಶಾಲಾ ಕಾಲೇಜುಗಲ ಆಡಳಿತ ವೃಂದ, ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಸೆಪ್ಟಂಬರ್ 10, 2018 ರಂದು ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನ ಎಂದು ಆಚರಿಸಲಾಗುತ್ತದೆ. ಈ ದಿನದಂದು ಆತ್ಮಹತ್ಯೆ ತಡೆಗಟ್ಟುವಿಕೆಯ ಬಗ್ಗೆ ಸಮಾಜಿಕ ಜಾಗೃತಿ ಮೂಡಿಸಲು ಜೀವನದತ್ತ ನಡಿಗೆ (ವಾಕ್ ಫೊರ್ ಲೈಫ್)ಯನ್ನು ಏರ್ಪಡಿಸಲಾಗಿದೆ. ಈ ನಡಿಗೆಯು ಸಂತ ಅಲೋಶಿಯಸ್ ಕಾಲೇಜಿನ ಮುಖ್ಯ ದ್ವಾರದಿಂದ (ಲೈಟ್ ಹೌಸ್ ಹಿಲ್ ರಸ್ತೆ) ಮುಂಜಾನೆ 7.00 ಗಂಟೆಗೆ ಪ್ರಾರಂಭವಾಗಿ ನೆಹರು ಮೈದಾನ(ಪುಟ್ಬಾಲ್ ಮೈದಾನ)ದಲ್ಲಿ ಕೊನೆಗೊಳ್ಳಲಿದೆ. ಇದರಲ್ಲಿ ಮಂಗಳೂರಿನ ಸುತ್ತಮುತ್ತಲಿನ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಆತ್ಮಹತ್ಯೆ ತಡೆಗಟ್ಟುವ ಪ್ಲಕಾರ್ಡ್ ಗಳೊಂದಿಗೆ ಈ ನಡಿಗೆಯಲ್ಲಿ ಭಾಗವಹಿಸುವರು. ವಿದ್ಯಾರ್ಥಿಗಳಿಗಾಗಿ ಪ್ಲಕಾರ್ಡ್ ಸ್ಪರ್ಧೆ ಏರ್ಪಡಿಸಿದ್ದು, ಅತ್ಯಂತ ಕ್ರಿಯಾಶೀಲ ಹಾಗೂ ಶಿಕ್ಷಣಾತ್ಮಕ ಪ್ಲಕಾರ್ಡ್‌ಗಳಿಗೆ ಬಹುಮಾನ ನೀಡಲಾಗುವುದು.
ಜಿಲ್ಲಾಧಿಕಾರಿ ಶ್ರೀ ಸಸಿಕಾಂತ್ ಸೆಂಥಿಲ್, ಐ.ಎ.ಎಸ್ ಇವರು ಈ ನಡಿಗೆಗೆ ಚಾಲನೆ ನೀಡುವರು. ಆತ್ಮಹತ್ಯೆಯ ಅಂಚಿನಿಂದ ಮರಳಿದ ಹಳ್ಳಿಮನೆ ರೊಟ್ಟಿಯ ಶ್ರೀಮತಿ ಶಿಲ್ಪ ಮತ್ತು ಶ್ರೀ ಸೈಮನ್ ಅವರು ಬಲೂನ್ ಬಿಡುಗಡೆ ಮಾಡುವರು.
ಪೊಲೀಸ್ ಕಮೀಷ್‌ನರ್ ಶ್ರೀ ಟಿ. ಆರ್. ಸುರೇಶ್ ಐ. ಪಿ. ಎಸ್. ಇವರು ನೆಹರು ಮೈದಾನದಲ್ಲಿ ಮುಂಜಾನೆ 8.30 ಗಂಟೆಗೆ ಆತ್ಮಹತ್ಯೆ ತಡೆಗಟ್ಟುವಿಕೆಯ ಮಹತ್ವದ ಬಗ್ಗೆ ಸಂದೇಶ ನೀಡಲಿದ್ದಾರೆ. ನಂತರ ರೋಶನಿ ನಿಲಯ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ 10 ನಿಮಿಷಗಳ ಕಾಲ ಆತ್ಮಹತ್ಯೆ ತಡೆಗಟ್ಟುವಿಕೆ ಕುರಿತು ಸಣ್ಣ ಕಾರ್ಯಕ್ರಮ ನಡೆಯಲಿದೆ.
ಸಾರ್ವಜನಿಕ ಹಿತಾಸಕ್ತಿಯಿಂದ ಶ್ರೀ ಬ್ರಾಯನ್ ಫೆರ್ನಾಂಡಿಸ್, ಮುಖ್ಯಸ್ತರು ಸ್ಪಿಯರ್‌ಹೆಡ್ ಮಿಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ಅವರ ತಂಡವು ತಯಾರಿಸಿದ ವಾಹನ ಸ್ಟಿಕರ್ಸ್‌ಗಳನ್ನು ವಿಶ್ವಾಸ್ ಬಾವಾ ಬಿಲ್ಡ್‌ರ್ಸ್‌ನ ಶ್ರೀ ಅಬ್ದುಲ್ ರೌಫ್ ಪುತ್ತಿಗೆ ಅವರು ಬಿಡುಗಡೆ ಮಾಡುವರು.
Click this button or press Ctrl+G to toggle between Kannada and English