ಮಂಗಳೂರು : ರಾಜ್ಯ ಸರಕಾರದ ಶಾಲಾ ಮಕ್ಕಳಿಗೆ ಕೊಡುವ ಅಕ್ಷರ ದಾಸೋಹದ ಯೋಜನೆಯಡಿ ಬರುವ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡಿ ಖಾಸಗಿ ರೈಸ್‌ಮಿಲ್‌ಗೆ ತಂದು ಗೋಣಿ ಬದಲಾಯಿಸಿ ಮಾರಾಟ ಮಾಡವ ಲಾರಿ ಕೆಎ -19- ಎಎ- 5508 ಲಾರಿ ಮತ್ತು ಚಾಲಕನನ್ನು ಪೊಲೀಸರು ಶುಕ್ರವಾರ ಬೆಳಿಗ್ಗೆ ವಶಪಡಿಸಿ ಕೊಂಡಿದ್ದಾರೆ.
ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಮಾಹಿತಿ ತಿಳಿಯುತ್ತಿದ್ದಂತೆ ಅಧಿಕಾರಿಗಳು ದಾಳಿ ನಡೆಸಿ ಸುಮಾರು 5 ಕ್ವಿಂಟಾಲ್ ಗೂ ಹೆಚ್ಚು ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.
ಮಂಗಳೂರಿನ ಶಕ್ತಿನಗರದಲ್ಲಿರುವ ಸರ್ಕಾರಿ ರೈಸ್ ಮಿಲ್ ನಿಂದ ಅಕ್ಕಿಯನ್ನು ಲಾರಿ ಮೂಲಕ ಸಾಗಾಟ ಮಾಡಿ ಮಂಗಳೂರು ಹೊರವಲಯದ ಬೊಂದೇಲ್ ನಲ್ಲಿರುವ ಖಾಸಗಿ ರೈಸ್‌ಮಿಲ್‌ಗೆ ತಂದು ಗೋಣಿ ಬದಲಾಯಿಸಿ ಮಾರಾಟ ಮಾಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.
ಪೊಲೀಸರ ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಪಾಂಡೇಶ್ವರ ಆರ್ಡ್ ನ ಕಾರ್ಪೊರೇಟರ್ ದಿವಾಕರ್, ಆರ್ ಟಿ ಐ ಕಾರ್ಯಕರ್ತ ಹನುಮಂತ್ ಕಾಮತ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ದಾಳಿ ಸಂದರ್ಭದಲ್ಲಿ ಅಕ್ರಮ ನಡೆಯುತ್ತಿರುವುದು ರೆಡ್ ಹ್ಯಾಂಡ್ ಆಗಿ ಪತ್ತೆಯಾಗಿದೆ.
ಲಾರಿ ಕೆಎ -19- ಎಎ- 5508 ಇದರಲ್ಲಿ ಅಕ್ಕಿಯನ್ನು ಖಾಸಗಿ ಮಳಿಗೆಯಲ್ಲಿ ಮಾರಾಟ ಮಾಡಲು ತಯಾರಿ ನಡೆಸಲಾಗಿತ್ತು. ಕಾವೂರು ಠಾಣೆಯ ಪೊಲೀಸರು ಲಾರಿ ಚಾಲಕ ಪೊಲೀಸ್ ವಶಕ್ಕೆ ಪಡೆದಿದ್ದಾರೆ.
ಈ ಹಿಂದೆ ಕೂಡ ರಾಜ್ಯದಾದ್ಯಂತ ಅಕ್ಕಿ ಹಗರಣ ಭಾರೀ ಸದ್ದು ಮಾಡಿತ್ತು. ಬಡವರಿಗಾಗಿ ಬರುವ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಡಿದ ಹಲವಾರು ಪ್ರಕರಣಗಳು ಈ ಸಂದರ್ಭದಲ್ಲಿ ಬೆಳಕಿಗೆ ಬಂದಿದ್ದವು.
Click this button or press Ctrl+G to toggle between Kannada and English