ಮಂಗಳೂರು : ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ಗಣಕ ಯಂತ್ರ ವಿಭಾಗದ ಘಟಕ ಆಸ್ಕೀ (ASCEE) ಇದರ ಉದ್ಘಾಟನಾ ಸಮಾರಂಭವು ಸಪ್ಟೆಂಬರ್8 ರಂದು ಜರುಗಿತು. ಮುಖ್ಯ ಅತಿಥಿಯಾಗಿ ಮಂಗಳೂರು ನೊವಿಗೊ ಸೊಲ್ಯುಷನ್ಸ್‌ನ ಪ್ರೋಗ್ರಾಮರ್ ಅನಾಲಿಸ್ಟ್ ಆಗಿರುವ ಶ್ರೀ. ಉಲ್ಲಾಸ ಕೊಟ್ಟಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ. ಉಲ್ಲಾಸ ಕೊಟ್ಟಾರಿ ರವರು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ದೈನಂದಿನ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಅಧಿಕ ಪರಿಶ್ರಮದ ಸದೃಢ ಮನೋಭಾವ ಅಳವಡಿಸಿಕೊಂಡಲ್ಲಿ ಯಶಸ್ಸಿನ ಶಿಖರವನ್ನೇರುವುದು ಖಚಿತ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಡಾ. ಶ್ರೀನಿವಾಸ ಮಯ್ಯ ಡಿ. ಅವರು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಆಸ್ಕೀ ಸಂಘದ ವತಿಯಿಂದ ಆಯೋಜಿಸಲಾಗುವ ತಾಂತ್ರಿಕ ಕೌಶಲ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅದರ ಪ್ರಯೋಜನವನ್ನು ಸದುಪಯೋಗಪಡಿಸಿಕೊಳ್ಳುವಂತೆ ಹಾಗೂ ಇನ್ನಷ್ಟು ಚಟುವಟಿಕೆಗಳನ್ನು ಕೈಗೊಳ್ಳುವಂತೆ ಉತ್ತೇಜಿಸಿದರು. ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯ ರೂಪಿಸುವಲ್ಲಿ ಈ ಸಂಘವು ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡುತ್ತದೆ ಎಂದು ಸೂಚಿಸಿದರು.
ಗಣಕ ಯಂತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಶಿವಕುಮಾರ್ ಜಿ. ಎಸ್. ರವರು ವಿದ್ಯಾರ್ಥಿಗಳು ಸಂಘದ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುವಂತೆ ಹಾಗೂ ಸಮಯೋಚಿತ ಅವಕಾಶಗಳನ್ನು ಸದುಪಯೋಗಪಡಿಸುವಂತೆ ಆಶಿಸಿದರು.
ಸಂಘದ ಸಂಯೋಜಕರಾದ ಪ್ರೊ. ರವಿಶಂಕರ ಕೆ. ಮಾತನಾಡಿ ಸಂಘದ ಧ್ಯೇಯ ಹಾಗೂ ಚಟುವಟಿಕೆಗಳ ಬಗ್ಗೆ ಬೆಳಕು ಚೆಲ್ಲಿದರು ಹಾಗೂ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ, ಭಾಗವಹಿಸುತ್ತಾ ಇರುವಂತೆ ಪ್ರೋತ್ಸಾಹಿಸಿದರು.
ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಅಫೀಝ ಎಮ್. ಅಲಿ ಸ್ವಾಗತಿಸಿ, ಕಾರ್ಯದರ್ಶಿ ಪ್ರಜ್ನೇಶ್ ಶೆಟ್ಟಿ ಎಸ್. ವಂದಿಸಿದರು.
ಸಮಾರಂಭದ ಕೊನೆಯಲ್ಲಿ ಶ್ರೀ. ಉಲ್ಲಾಸ ಕೊಟ್ಟಾರಿ ಅವರು “SMART OFFICE with Microsoft Office 365” ಎಂಬ ವಿಷಯದ ಕುರಿತು ತಾಂತ್ರಿಕ ಉಪನ್ಯಾಸ ನೀಡಿದರು.
Click this button or press Ctrl+G to toggle between Kannada and English