ಹಿಂದಿನ ಕಾಲದ ಶಿಕ್ಷಕರು ಜೀವನ ಸಾಫಲ್ಯತೆಯ ಮಾರ್ಗಗಳನ್ನು ಬೋಧಿಸುತ್ತಿದ್ದರು : ಪಶುಪತಿ ಶಾಸ್ತ್ರಿ

9:41 PM, Saturday, September 8th, 2018
Share
1 Star2 Stars3 Stars4 Stars5 Stars
(No Ratings Yet)
Loading...

Pashupatiಮೂಡುಬಿದಿರೆ : ಒಬ್ಬ ಪರಿಪೂರ್ಣ ಶಿಕ್ಷಕನಿಂದ ಮಾತ್ರ ಉತ್ತಮ ವಿದ್ಯಾರ್ಥಿಯನ್ನು ನಿರ್ಮಿಸಲು ಸಾದ್ಯ. ಹಿಂದಿನ ಕಾಲದ ಶಿಕ್ಷಕರು ಮಕ್ಕಳಿಗೆ ಕೇವಲ ವಿದ್ಯೆಯನ್ನು ಧಾರೆಯೆರೆಯುತ್ತಿರಲಿಲ್ಲ, ಅವರಲ್ಲಿ ಮಾನವೀಯ ಮೌಲ್ಯದೊಂದಿಗೆ ಜೀವನ ಸಾಫಲ್ಯತೆಯ ಮಾರ್ಗಗಳನ್ನು ಬೋಧಿಸುತ್ತಿದ್ದರು ಎಂದು ನಿವೃತ್ತ ಶಿಕ್ಷಕ ಪಶುಪತಿ ಶಾಸ್ತ್ರಿ ತಿಳಿಸಿದರು.

ಅವರು ಆಳ್ವಾಸ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಗೌರವ ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಿದ್ದರು.
ಆ ಕಾಲದ ಶಿಕ್ಷಕರು ತಾವು ಹೆಚ್ಚಿನ ಜ್ಞಾನವನ್ನು ಸಂಪಾದಿಸಿಕೊಂಡು ವಿದ್ಯಾರ್ಥಿಗಳಿಗೆ ಬೋಧನೆಯನ್ನು ಮಾಡುತ್ತಿದ್ದರು. ತಮ್ಮ ವಿದ್ಯಾರ್ಥಿಗಳಿಗೆ ಪ್ರೀತಿಯ ಪೆಟ್ಟು ಹಾಗು ಶಿಕ್ಷಾ ರೂಪದ ಪೆಟ್ಟಿನ ಮೂಲಕ ಸನ್ನಡತೆಯ ಮಾರ್ಗದಲ್ಲಿ ನಡೆಯುವಂತೆ ನೋಡಿಕೊಳ್ಳುತ್ತಿದ್ದರು.

ಇಂದಿನ ಶಿಕ್ಷಕರು ಕೇವಲ ಬೋಧನೆಗೆ ಸೀಮಿತರಾಗಿರುವುದರಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಸಮಯಪ್ರಜ್ಞೆ, ಮೌಲ್ಯಗಳ ಕೊರತೆ ಎದ್ದು ಕಾಣುತ್ತಿದೆ. ಜ್ಞಾನದ ವಿನಿಮಯವಾಗಬೇಕಿದ್ದ ಶಿಕ್ಷಕರ ಕೊಠಡಿಗಳಿಂದು ವೃತ ಚರ್ಚೆಯ ಕೇಂದ್ರಗಳಾಗಿ ಬದಲಾಗುತ್ತಿವೆ. ಅಲ್ಲದೆ ಇಂದಿನ ಯುವ ಸಮುದಾಯ ನಿರ್ಜೀವವಾಗಿರುವ ಜಂಗಮವಾಣಿಯೊಂದಿಗೆ ಹೆಚ್ಚು ಸಮಯ ಕಳೆಯಲು ಬಯುಸುತ್ತದೆಯೇ ಹೊರತು, ಜೀವವಿರುವ ಮನುಷ್ಯನೊಂದಿಗಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಕರ ಬೋಧನೆಯಿಂದ ಪ್ರಭಾವಿತರಾಗುದಕ್ಕಿಂತಲೂ ಹೆಚ್ಚು ಶಿಕ್ಷಕರ ನಡೆ ನುಡಿಯನ್ನು ಅನುಸರಿಸುತ್ತಾರೆ. ಆದ್ದರಿಂದ ಒಬ್ಬ ಶಿಕ್ಷಕ ತಮ್ಮ ವಿದ್ಯಾರ್ಥಿಗಳಿಗೆ ಎಲ್ಲಾ ರೂಪದಲ್ಲೂ ಮಾದರಿಯಾಗಿರಬೇಕು ಎಂದರು. ಈ ಕಾಲದ ಅನಿವಾರ್ಯತೆಗಳಿಗನುಗುಣವಾಗಿ ತಮ್ಮನ್ನು ಮೆಲ್ದರ್ಜಗೆ ಕೊಂಡೊಯ್ಯುತ್ತಾ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಶ್ರಮಿಸುವುದು ಪ್ರತಿಯೊಬ್ಬ ಶಿಕ್ಷಕನ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ‍್ಯ ಡಾ ಕುರಿಯನ್, ನಮ್ಮ ತಿಳಿವಿಗೆ, ನಮ್ಮ ವಿದ್ಯಾರ್ಥಿಗಳ ಬೆಳವಣಿಗೆಗೆ, ನಮ್ಮನ್ನು ನಾವು ರೂಪಿಸಿಕೊಳ್ಳುವುದಕ್ಕೆ ಹಾಗೂ ಸಂಸ್ಥೆಯ ಉನ್ನತಿಗೆ ನಾವು ಎಷ್ಟು ನಿಷ್ಯರ್ತವಾಗಿ ತೊಡಗಿಸಿಕೊಂಡಿದ್ದೆವೆ ಎಂಬುದನ್ನು ಪ್ರತಿಯೊಬ್ಬರೂ ಆತ್ಮವಾಲೋಕನ ಮಾಡಿಕೊಳ್ಳಬೇಕು ಎಂದರು.

ಕಾರ‍್ಯಕ್ರಮದಲ್ಲಿ 2017-18  ಸಾಲಿನಲ್ಲಿ ಡಾಕ್ಟರೇಟ್ ಪದವಿ ಪಡೆದ, ಹೆಚ್ಚು ರಿಸರ್ಚ ಪಬ್ಲಿಕೇಶನ್ ಮಾಡಿದ, ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಪೇಪರ್ ಪ್ರಸೆಂಟೆಶನ್ ಮಾಡಿದ ಉಪನ್ಯಾಸಕರನ್ನು ಗುರುತಿಸಲಾಯಿತು. ಉಪನ್ಯಾಸಕಿ ಶ್ರೇಯಾ ”ಗಾಳಿಯು ನಿನ್ನದೆ, ದೀಪವು ನಿನ್ನದೆ” ಆಶಯ ಗೀತೆ ಯನ್ನು ಹಾಡಿದರು.

ಕಾಲೇಜಿನ ಸಹ ಆಡಳಿತಾಧಿಕಾರಿ ಅಭಿನಂದನ್ ಶೆಟ್ಟಿ ವಿವಿಧ ವಿಭಾಗಗಳ ಡೀನ್‌ಗಳು ಉಪಸ್ಥಿತರಿದ್ದರು. ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ ಮೌಲ್ಯ ಕಾರ‍್ಯಕ್ರಮ ನಿರ್ವಹಿಸಿ, ವಾಣಿಜ್ಯ ವಿಭಾಗದ ಡೀನ್ ಸುರೇಖಾ ಸ್ವಾಗತಿಸಿ, ಭಾಷಾ ವಿಭಾಗದ ಡೀನ್ ಡಾ ರಾಜೀವ ವಂದಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English