ಮಂಗಳೂರು : ಕಳೆದ 25 ವರ್ಷಗಳಿಂದ ನಗರದ ಕೇಂದ್ರ ಮೈದಾನದಲ್ಲಿ ನಡೆಯುವ ಗಣೇಶೋತ್ಸವಕ್ಕೆ ಈಗ 26 ನೇ ವರ್ಷದ ಸಂಭ್ರಮ.
ಸಪ್ಟೆಂಬರ್ 13 ಗುರುವಾರದಿಂದ ಆರಂಭಗೊಂಡು ಸಪ್ಟೆಂಬರ್ 19 ಬುಧವಾರದವರಗೆ ವಿವಿಧ ಕಾರ್ಯಕ್ರಮಗಳೊಂದಿ ಗೆ ವಿಜೃಂಭಣೆಯಿಂದ ಮಂಗಳೂರು ಗಣೇಶೋತ್ಸವ ನಡೆಯಲಿದೆ.
ಈ ಸಂದರ್ಭದಲ್ಲಿ ಕರ್ನಾಟಕದ ಹೆಸರಾಂತ ಕಲಾವಿದರಿಂದ ಭಕ್ತಿಗೀತೆ, ರಸಮಂಜರಿ, ನಾಟಕ, ಭರತನಾಟ್ಯ, ಶೋಭಾಯಾತ್ರೆಯ ಸಂದರ್ಭದಲ್ಲಿ ಆಕರ್ಷಕ ಸುಡುಮದ್ದು ಪ್ರದರ್ಶನ, ಹಲವಾರು ದೃಶ್ಯರೂಪಕ ಸ್ತಬ್ಧ ಚಿತ್ರಗಳು ಪಾಲ್ಗೊಳ್ಳಲಿದೆ.
ಸಪ್ಟೆಂಬರ್ 19 ಬುಧವಾರದಂದು ಮಹಾಗಣಪತಿ ದೇವರ ಶೋಭಾಯಾತ್ರೆಯು ಛತ್ರಪತಿ ಶಿವಾಜಿ ಮಂಟಪದಿಂದ ಹೊರಟು ಎ. ಬಿ. ಶೆಟ್ಟಿ ವೃತ್ತ, ಸಿಗ್ನಲ್ ವೃತ್ತ ಕೆ .ಎಸ್. ರಾವ್ ರಸ್ತೆ, ನವಭಾರತ್ ವೃತ್ತ, ಡೊಂಗರಕೇರಿ, ಚಿತ್ರ ಟಾಕೀಸ್ ರಸ್ತೆ, ಶ್ರೀನಿವಾಸ ಟಾಕೀಸ್ ರಸ್ತೆ ಮೂಲಕ ರಥಬೀದಿ ಶ್ರೀ ವೆಂಕಟ್ರಮಣ ದೇವಸ್ಥಾನದಿಂದಾಗಿ ಶ್ರೀ ಮಹಮ್ಮಾಯೀ ಕೆರೆಯಲ್ಲಿ ಶ್ರೀ ದೇವರನ್ನು ಜಲಸ್ಥಂಬನ ಗೊಳ್ಳಲಿದೆ.
ಉದ್ಘಾಟನಾ ಸಮಾರಂಭ
ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್ ಸುರೇಶ್ ಅವರು ಗುರುವಾರ ಬೆಳಗ್ಗೆ ದೀಪ ಬೆಳಗಿಸಿ ‘ಮಂಗಳೂರು ಗಣೇಶೋತಸ್ವಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಕರಾವಳಿ ಕಾಲೇಜಿನ ಮುಖ್ಯಸ್ಥ ಗಣೇಶ್ ರಾವ್, ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಹೋಟೇಲ್ ಪ್ರೆಸ್ಟೀಜ್ ಇಂಟರ್ ನ್ಯಾಷನಲ್ ಬಲ್ಮಠ ಇದರ ನಿರ್ದೇಶಕ ದಾಮೋದರ ಶೆಟ್ಟಿ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಶಿಕಾಂತ್ ನಾಗ್ವೇಕರ್ ಮತ್ತು ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English