ಉಡುಪಿ : ಟ್ಯಾಂಕರ್ ಹಾಗೂ ಅಕ್ಟಿವಾ ನಡುವೆ ಬುಧವಾರ ಸಂಜೆ ಸಂಭವಿಸಿದ ಭೀಕರ ಅಪಘಾತದಲ್ಲಿ ಅಕ್ಟಿವಾ ಸವಾರ ಸ್ಥಳದಲ್ಲೆ ಮೃಥಪಟ್ಟ ಘಟನೆ ನಡೆದಿದೆ.
ಮೃತ ಪಟ್ಟ ವ್ಯಕ್ತಿಯನ್ನು ಸ್ಕೂಟರ್ ಸವಾರ ಉಪ್ಪೂರು ನಿವಾಸಿ ಗಂಗಾಧರ ಮರಕ್ಕಳ 54. ಎಂದು ಗುರುತಿಸಲಾಗಿದೆ.
ತೆಂಗಿನಕಾಯಿ ವ್ಯಾಪಾರಿಯಾಗಿದ್ದ ಗಂಗಾಧರ ಮರಕ್ಕಳ ಇಂದು ಸಂಜೆ ಉಡುಪಿ ತೆಂಕಪೇಟೆಗೆ ಕಲೆಕ್ಷನ್ ಗೆ ಬಂದಿದ್ದರು. ಅಲ್ಲಿಂದ ವಾಪಾಸು ಉಪ್ಪೂರಿಗೆ ಹೊರಟಾಗ ಬ್ರಹ್ಮಾವರ ಕಡೆಯಿಂದ ಉಡುಪಿಗೆ ಬರುತ್ತಿದ್ದ ಟ್ಯಾಂಕರ್ ನ ಹಿಂಬದಿ ಚಕ್ರಕ್ಕೆ ಸಿಲುಕಿ ಅವರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.
ಊಡುಪಿ ನಗರ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ.
Click this button or press Ctrl+G to toggle between Kannada and English