ಗೊಂದಲವಿದ್ದರೂ ಸರಕಾರ ಬೀಳುವ ಮಟ್ಟಕ್ಕೆ ಯಾವುದೇ ಸಮಸ್ಯೆ ಇಲ್ಲ: ಡಾ.ಜಿ. ಪರಮೇಶ್ವರ್ 

3:00 PM, Friday, September 14th, 2018
Share
1 Star2 Stars3 Stars4 Stars5 Stars
(No Ratings Yet)
Loading...

parameshwarಬೆಂಗಳೂರು: ಆಂತರಿಕವಾಗಿ ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ, ಕೆಲ ಗೊಂದಲವಿದ್ದರೂ ಸರಕಾರ ಬೀಳುವ ಮಟ್ಟಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಸ್ಪಷ್ಟಪಡಿಸಿದ್ದಾರೆ.

ಸಚಿವ ಡಿ.ಕೆ.‌ಶಿವಕುಮಾರ್ ನಿವಾಸಕ್ಕೆ ತೆರಳಿ ಅವರೊಂದಿಗೆ ವಿವಿಧ ವಿಚಾರಗಳ ಬಗ್ಗೆ ಚರ್ಚಿಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿ ಅವರು, ಆಂತರಿಕವಾಗಿ ಪಕ್ಷದಲ್ಲಿ ಅಸಮಾಧಾನ ಇಲ್ಲ, ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅವರು ಹೇಳಿದ್ದಾರೆ. ಹೊಗೆ ಆಡಿದ ತಕ್ಷಣವೇ ದೊಡ್ಡ ಅನಾಹುತ ಅಂದರೆ ಹೇಗೆ. ತಾವೆಲ್ಲಾ ತಿಳಿದಿರುವಷ್ಟು ವಿಷಯ ಗಂಭೀರವಾಗಿಲ್ಲ, ‌ ಸರ್ಕಾರ ಸುಭದ್ರವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯಿಂದ ಕಾಂಗ್ರೆಸ್ ಶಾಸಕರಿಗೆ ಲಂಚದ ಅಮಿಷ ವಿಚಾರವಾಗಿಎಸಿಬಿಗೆ ದೂರು ನೀಡಲು ನಿರ್ಧರಿಸಿದ್ದೇವೆ. ಮಾಧ್ಯಮಗಳಲ್ಲೂ ಈ ಸುದ್ದಿ ಬರುತ್ತಿದೆ. ಅದರ ಆಧಾರದ ಮೇಲೆಯೇ ದೂರು ನೀಡಲು ತೀರ್ಮಾನ ಮಾಡಲಾಗಿದೆ.

ಬಿಜೆಪಿ ನಾಯಕರಿಗೆ ಇಷ್ಟರಲ್ಲೇ ಸಿಹಿ ಸುದ್ದಿ ಎಂಬ ಬಿಎಸ್ ವೈ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿಹಿ ಸಿಕ್ಕದ್ದರೆ ತಿಂದುಕೊಳ್ಳಲಿ ಬಿಡಿ ಎಂದು ವ್ಯಂಗ್ಯವಾಡಿದರು.

ಬೆಳಗಾವಿ ರಾಜಕಾರಣ ಆಂತರಿಕವಾದದ್ದು, ಡಿಕೆಶಿ ಅವರು ನೀರಾವರಿ ಸಚಿವರಾಗಿರುವುದರಿಂದ ರಾಜ್ಯದ ಎಲ್ಲ ಭಾಗಗಳಿಗೆ ಭೇಟಿ ಕೊಡುತ್ತಾರೆ. ಇದನ್ನೇ ಹಸ್ತಕ್ಷೇಪ ಎಂದರೆ ಹೇಗೆ. ಪಕ್ಷದ ಕಚೇರಿ ನಿರ್ಮಾಣವನ್ನೂ ಡಿಕೆ ಶಿವಕುಮಾರ್ ಅವರಿಗೆ ಒಪ್ಪಿಸಿದ್ದೇವೆ. ಹೀಗಾಗಿ ಬೆಳಗಾವಿಗೆ ಹೋಗಿ ಬಂದಿದ್ದರು ಎಂದು ತಿಳಿಸಿದರು.

ಸಚಿವ ಸಂಪುಟ ವಿಸ್ತರಣೆ ವಿಚಾರ ಚರ್ಚೆಯಲ್ಲಿದೆ. ಯಾರನ್ನು ಮಂತ್ರಿ ಮಾಡಬೇಕು, ಯಾವ ಸಮುದಾಯಕ್ಕೆ ಮಂತ್ರಿಗಿರಿ ಕೊಡಬೇಕು ಎಂಬ ಚರ್ಚೆ ನಡೆದಿದೆ. ಸಿದ್ದರಾಮಯ್ಯ ಅವರು ಬಂದ ಕೂಡಲೇ ಚರ್ಚೆ ಮಾಡಲಾಗುವುದು ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English