ಕೊಡಗಿನಲ್ಲಿ ಲಘು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟ NDRF ತಂಡ

3:36 PM, Friday, September 14th, 2018
Share
1 Star2 Stars3 Stars4 Stars5 Stars
(No Ratings Yet)
Loading...

kodaguಕೊಡಗು: ನಿರಂತರವಾಗಿ ಸುರಿದ ಮಳೆ ಪರಿಣಾಮ ಮಡಿಕೇರಿ ಮತ್ತು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹಾನಿಯಾಗಿತ್ತು. ಈ ರಸ್ತೆ ನಿರ್ಮಾಣ ಮಾಡಲು ಇನ್ನೂ ಆರು ತಿಂಗಳು ಬೇಕಾಗಲಿದೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದರು.

ಕೊಡಗಿಗೆ ಭೇಟಿ ನೀಡಿದ್ದ ಸಂದರ್ಭ ಭರವಸೆ ನೀಡಿ ಹೋದರೇ ವಿನಾ ಕಾಮಗಾರಿ ಕೈಗೊಳ್ಳಲು ಮುಂದಾಗಿರಲಿಲ್ಲ. ಆದರೆ ಜಿಲ್ಲೆಗೆ ಭೇಟಿ ನೀಡಿದ್ದ ಕೇಂದ್ರ ಸರ್ಕಾರದ NDRF ತಂಡ ಕೇವಲ 20 ದಿನಗಳಲ್ಲಿ ಸುದೀರ್ಘ ಕಾರ್ಯ ನಡೆಸಿ ತಾತ್ಕಾಲಿಕವಾಗಿ ರಸ್ತೆ ಮೇಲೆ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟಿದೆ. ಸದ್ಯಕ್ಕೆ ದ್ವಿಚಕ್ರ ವಾಹನ ಮತ್ತು ಲಘು ವಾಹನಗಳ ಓಡಾಟಕ್ಕೆ ಅನುವು ಮಾಡಲಾಗಿದೆ. ಮರಳು, ಸಿಮೆಂಟು, ರಬ್ಬರ್ ಶೀಟ್ ಹೊದೆಸಿ ರಸ್ತೆ ನಿರ್ಮಾಣ ಮಾಡಲಾಗಿದ್ದು, ಕೆಲವು ಕಡೆಗಳಲ್ಲಿ ಏಖಮುಕ ಸಂಚಾರ ಮಾಡಲು ಸೂಚನೆ ನೀಡಲಾಗಿದೆ. ಅದಲ್ಲದೆ ಮಡಿಕೇರಿಯಿಂದ ಸಂಪಾಜೆವರೆಗೆ ವೇಗದ ಚಾಲನೆ, ಓವರ್ ಟೇಕ್ ಮಾಡದಂತೆ ಆದೇಶಿಸಲಾಗಿದೆ.

ಗುಡ್ಡ ಕುಸಿತ ಸ್ಥಳಗಳಲ್ಲಿ ವಾಹನ ನಿಲುಗಡೆ ನಿಷೇಧವಾಗಿದೆ. ಇದೇ ರೀತಿ ಬಿಸಿಲು ಮುಂದುವರೆದಲ್ಲಿ ಶೀಘ್ರವಾಗಿ ಬಸ್ಸು ಸಂಚಾರ ನಡೆಸಲು ರಸ್ತೆ ನಿರ್ಮಾಣ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English