ಮಂಗಳೂರು : ಕುತ್ತಾರ್ ಪಂಡಿತ್ ಹೌಸ್ ಬಳಿ ಉಳ್ಳಾಲ ನಗರ ಸಭೆಯಲ್ಲಿ ಚುನಾಯಿತರಾದ ಕಾಂಗ್ರೆಸ್ ಅಭ್ಯರ್ಥಿ ಕು .ದೀಕ್ಷಿತ ಅವರ ಪ್ಲೆಕ್ಸ್ ನಲ್ಲಿ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರ ಫೋಟೋವನ್ನು ಮಾತ್ರ ಕತ್ತರಿ ಪ್ರಯೋಗ ಮಾಡಿ ಹರಿದು ಹಾಕಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.
ಆದರೆ ಕುತೂಹಲ ವೆಂದರೆ ಪಕ್ಕದಲ್ಲಿರುವ ಪೊಲೀಸರ ಅಭಿನಂದನೆ ಪ್ಲೆಕ್ಸ್ ಗೆ ಯಾವುದೇ ಹಾನಿಯಾಗಿಲ್ಲ
ನಗರ ಸಭೆಗೆ ಇತ್ತೀಚೆಗೆ ನಡೆದ ಚೆಂಬುಗುಡ್ಡೆ ವಾರ್ಡ್ನಲ್ಲಿ ಕಾಂಗ್ರೆಸಿಂದ ಗೆದ್ದ ಕು .ದೀಕ್ಷಿತ ಅವರಿಗೆ ಅಭಿನಂದನೆ ಕೋರಿ ಕಾರ್ಯಕರ್ತರು ದೊಡ್ಡ ಪ್ಲೆಕ್ಸ್ ಹಾಕಿದ್ದರು. ಇದರಲ್ಲಿ ಶಾಸಕರೂ, ಉಸ್ತುವಾರಿ ಸಚಿವರೂ ಆದ ಯು.ಟಿ.ಖಾದರ್ ಅವರ ಫೋಟೊವನ್ನು ಹಾಕಿದ್ದರು. ಇದರಲ್ಲಿ ಕು .ದೀಕ್ಷಿತಗೆ ಏನೂ ಹಾನಿ ಮಾಡದ ದುಷ್ಕರ್ಮಿಗಳು ಕೇವಲ ಖಾದರ್ ಭಾವಚಿತ್ರವನ್ನು ಹರಿದು ಹಾಕಿದ್ದಾರೆ.
ಅದರ ಸ್ವಲ್ಪವೇ ಮುಂಭಾಗದಲ್ಲಿ ನಗರ ಅಪರಾಧ ಗುಪ್ತವಾರ್ತೆ ವಿಭಾಗದ ಪೊಲೀಸ್ ಚಂದ್ರಶೇಖರ ಅವರಿಗೆ ಅಭಿನಂದನೆ ಕೋರಿ ದೊಡ್ಡ ಪ್ಲೆಕ್ಸ್ ಹಾಕಿದ್ದಾರೆ. ಅವರಿಗೆ ಇತ್ತೀಚೆಗೆಮುಖ್ಯಮಂತ್ರಿ ಪದಕ ಲಭಿಸಿತ್ತು. ಆದರೆ ಪ್ಲೆಕ್ಸ್ಗೆ ಯಾವುದೇ ಹಾನಿಯಾಗಿಲ್ಲ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Click this button or press Ctrl+G to toggle between Kannada and English