ಬೆಂಗಳೂರು: ಪರಿಸರಮಾಲಿನ್ಯ ಆಗದಂತೆ ಗಣೇಶ ಚತುರ್ಥಿ ಹಿನ್ನಲೆಯಲ್ಲಿ ಪಿಒಪಿ (ಪ್ಲಾಸ್ಟರ್ ಆಫ್ ಪ್ಯಾರೀಸ್ ) ಹಾಗೂ ಬಣ್ಣದ ಗಣೇಶ ಮೂರ್ತಿಯನ್ನು ಬಳಸದಂತೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸಾಕಷ್ಟು ಜನಜಾಗೃತಿ ಕಾರ್ಯಕ್ರಮದ ಪರಿಣಾಮವಾಗಿ ರಾಜ್ಯದಲ್ಲಿ ಪಿಒಪಿ ಗಣೇಶ ಮೂರ್ತಿಯ ಬಳಕೆ ಪ್ರಮಾಣದಲ್ಲಿ ಮಹತ್ತರ ಬದಲಾವಣೆ ಕಂಡುಬಂದಿದೆ.
ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಪಿಒಪಿ ಗಣೇಶ ವಿಸರ್ಜನೆಯಾಗಿದೆ. ಇದರ ಅಂಕಿ ಅಂಶವನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆಗೊಳಿಸಿದೆ.
ಪ್ರಾದೇಶಿಕ ಕಚೇರಿಗಳಲ್ಲಿ ಒಟ್ಟು 7169 ಗಣೇಶ ಮೂರ್ತಿಗಳು ವಿಸರ್ಜನೆಯಾಗಿದೆ. ಇವುಗಳಲ್ಲಿ 80 ಪಿಒಪಿ ಮೂರ್ತಿಗಳಾಗಿದ್ದು, 3766 ಬಣ್ಣ ರಹಿತ ಹಾಗೂ 3323 ಬಣ್ಣ ಸಹಿತ ಮೂರ್ತಿಗಳಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಸರ್ಜಿಸಿದ 1,13,958 ಮೂರ್ತಿಗಳಲ್ಲಿ 14,000 ಪಿಒಪಿ ಗಣೇಶ. ಇನ್ನು ವಿವಿಧ ಜಿಲ್ಲಾ ಸ್ಥಳೀಯ ಸಂಸ್ಥೆಗಳ ವ್ಯವಸ್ಥೆಯಲ್ಲಿ ವಿಸರ್ಜಿಸಿದ ಮೂರ್ತಿಗಳು ಒಟ್ಟು 8514 ಆಗಿದ್ದರೆ, ಇವುಗಳಲ್ಲಿ 390 ಪಿಒಪಿ ಮೂರ್ತಿಗಳಾಗಿದ್ದವು.
Click this button or press Ctrl+G to toggle between Kannada and English