ಬೆಂಗಳೂರು:ಸಹಕಾರಿ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಕೃಷಿ ಸಾಲವನ್ನು ಮನ್ನಾ ಮಾಡಲು ಎರಡನೇ ಕಂತಾಗಿ 1495.65 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ.
ಸಹಕಾರಿ ಬ್ಯಾಂಕಿನಲ್ಲಿನ ಸಾಲದ 50,000 ಸಾವಿರ ಹಣವನ್ನು ಮನ್ನಾ ಮಾಡಲಾಗುತ್ತಿದೆ. ಹೀಗಾಗಿ ಅದರ ಮೊದಲ ಕಂತಿನಲ್ಲಿ 1000 ಕೋಟಿ ಬಿಡುಗಡೆ ಮಾಡಲಾಗಿತ್ತು.ಈಗ ಎರಡನೇ ಕಂತಾಗಿ 1495.65 ಕೋಟಿ ಬಿಡುಗಡೆ ಮಾಡಲಾಗಿದೆ.
ಈ ಬಗ್ಗೆ ಸರ್ಕಾರಿ ಆದೇಶ ಹೊರಡಿಸಲಾಗಿದ್ದು ದಿನಾಂಕ 20/ 06/2017ರ ಒಳಗೆ ಪಡೆದಿರುವ 50,000 ಅಲ್ಪಾವಧಿ ಬೆಳೆಸಾಲ ಮನ್ನಾ ಮಾಡಲಾಗುತ್ತಿದೆ.ಒಟ್ಟು ಸಹಕಾರಿ ಬ್ಯಾಂಕಿನಲ್ಲಿನ 4000 ಕೋಟಿ ರೂಪಾಯಿ ಸಾಲಮನ್ನಾ ಮಾಡಲಾಗುತ್ತದೆ.
ಮೊದಲು ಬಿಡುಗಡೆ ಮಾಡಲಾಗಿದ್ದ 1000 ಕೋಟಿ ಅನುದಾನವನ್ನು ಬಳಕೆ ಮಾಡಿದ ಬಗ್ಗೆ ಪ್ರಮಾಣ ಪತ್ರ ಬಿಡುಗಡೆ ಮಾಡಿದ ನಂತರವೇ ಎರಡನೇ ಕಂತಿನ 1495.65 ಕೋಟಿ ಬಿಡುಗಡೆ ಮಾಡಲಾಗಿದೆ.
Click this button or press Ctrl+G to toggle between Kannada and English