ಬೆಂಗಳೂರು:ಬೆಂಗಳೂರಲ್ಲಿ ಟ್ರಾಫಿಕ್ ಸಮಸ್ಯೆಯನ್ನು ತಡೆಗಟ್ಟಲು ಹೊಸ ಯೋಜನೆಯನ್ನು ಕೈಗೊಳಲ್ಗಿದೆ. ರಾಜ್ಯ ಸರ್ಕಾರದ ನಗರ ರಸ್ತೆ ಸಾರಿಗೆ ನಿರ್ದೇಶನಾಲಯ ಮತ್ತು ಜಪಾನ್ ಇಂಟರ್ ನ್ಯಾಷನಲ್ ಕೋ-ಆಪರೇಷನ್ ಏಜೆನ್ಸಿ ಜಂಟಿಯಾಗಿ ಬೆಂಗಳೂರು ಮತ್ತು ಮೈಸೂರು ಸಂಚಾರ ನಿರ್ವಹಣೆಗೆ ಹೊಸ ಯೋಜನೆ ರೂಪಿಸಲಾಗಿದೆ.
ಒಪ್ಪಂದದ ಪ್ರಕಾರ 2019ರ ಫೆಬ್ರವರಿಯಿಂದ ತಂತ್ರಜ್ಞಾನ ಅಳವಡಿಕೆ ಆರಂಭವಾಗಿ 2020ರ ಅಕ್ಟೋಬರ್ ವೇಳೆಗೆ ಬಳಕೆಗೆ ಸಾಧ್ಯವಾಗುತ್ತದೆ. ಹಾಗೆಯೇ ತಂತ್ರಜ್ಞಾನ ಅಳವಡಿಕೆಯ ನಂತರದ ಒಂದು ವರ್ಷಕಾಲ ಸ್ಥಳೀಯ ಸಿಬ್ಬಂದಿಗೆ ಬಗ್ಗೆ ತಿಳಿವಳಿಕೆ ಮತ್ತು ತರಬೇತಿ ನೀಡುವುದಕ್ಕೂ ಜಪಾನ್ ತಜ್ಞರು ನೆರವಾಗಲಿದ್ದಾರೆ.
ಒಟ್ಟು 757.8 ಕೋಟಿ ರೂ ವೆಚ್ಚದಲ್ಲಿ ಬೆಂಗಳೂರಿನ 29 ಜಂಕ್ಷನ್ ಗಳ ನಿರ್ವಹಣೆಯನ್ನು ಬುದ್ಧಿವಂತ ಸಾರಿಗೆ ವ್ಯವಸ್ಥೆ ಹೆಸರಿನಲ್ಲಿ ತರಲಾಗುತ್ತದೆ.
ಕೇಂದ್ರ ಸರ್ಕಾರ ಮತ್ತು ಜೆಐಸಿಎ ನಡುವೆ ನಡೆದಿರುವ ಒಪ್ಪಂದದ ಭಾಗವಾಗಿ ರಾಜ್ಯ ಸರ್ಕಾರ ಕೂಡ ಸಹಿ ಹಾಕಿದೆ.ತಾಂತ್ರಿಕ ಶಿಫಾರಸ್ಸುಗಳನ್ನು ಜಾರಿ ಮಾಡಲು ಇರುವ ಕಷ್ಟಕರವಾದ ಸಂಗತಿಗಳ ಬಗ್ಗೆ ಪರಿಶೀಲನೆಯನ್ನು ಜೆಐಸಿಎ ನಡೆಸಲಿದ್ದಾರೆ.
Click this button or press Ctrl+G to toggle between Kannada and English