ಅರಮನೆಗೆ ಗೌರವಧನ ನೀಡುವ ಬಗ್ಗೆ ವಿವಾದ ಬೇಡ: ಸಚಿವ ಜಿಟಿಡಿ

10:12 AM, Tuesday, September 18th, 2018
Share
1 Star2 Stars3 Stars4 Stars5 Stars
(No Ratings Yet)
Loading...

aramaneಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಅರಮನೆ ಹಾಗೂ ಸರ್ಕಾರ ಒಟ್ಟಿಗೆ ಹೋಗಲಿದ್ದು, ಇದರಲ್ಲಿ ಯಾವುದೇ ಅನುಮಾನ ಬೇಡ. ದಸರಾ ಮಹೋತ್ಸವದ ಸಂದರ್ಭದಲ್ಲಿ ರಾಜವಂಶಸ್ಥರಿಗೆ ಸರ್ಕಾರದಿಂದ ಪ್ರತಿ ವರ್ಷದಂತೆ ಗೌರವಧನ ನೀಡಲಿದ್ದು, ಈ ವಿಷಯದ ಬಗ್ಗೆ ಯಾವುದೇ ವಿವಾದ ಸೃಷ್ಟಿಸಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

ನಗರದ ವಿಶ್ವವಿದ್ಯಾನಿಲಯ ಕ್ರಾಫರ್ಡ್ ಭವನದಲ್ಲಿ ರಾಜ್ಯದ ಎಲ್ಲಾ ಕುಲಪತಿಗಳೊಂದಿಗೆ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜವಂಶಸ್ಥರು ಹೇಳಿರುವಂತೆ ಸರ್ಕಾರದಿಂದ ನಡೆಸುವುದು ನಾಡಹಬ್ಬವಾಗಿದ್ದು, ಇದು ಸಹ ರಾಜವಂಶಸ್ಥರ ಸಹಕಾರದಲ್ಲೇ ನಡೆಯುತ್ತಿದೆ. ನಾಡಹಬ್ಬ ದಸರಾ ಆಚರಣೆ ವಿಷಯದಲ್ಲಿ ಸರ್ಕಾರ ಹಾಗೂ ರಾಜವಂಶಸ್ಥರು ಒಟ್ಟಾಗಿ ಆಚರಣೆ ಮಾಡಲಿವೆ. ಹೀಗಾಗಿ ಯಾರು ಏನೇ ಹೇಳಿದರು ಹಿಂದಿನಿಂದ ನಡೆದು ಬಂದಿರುವ ಪದ್ಧತಿಯನ್ನು ಪಾಲನೆ ಮಾಡಲಿದ್ದು, ಗೌರವಧನ ನೀಡುವ ಪದ್ಧತಿಯಲ್ಲೂ ಯಾವುದೇ ಬದಲಾವಣೆ ಇರುವುದಿಲ್ಲ. ಈ ಬಗ್ಗೆ ಯಾರೊಬ್ಬರು ಯಾವುದೇ ವಿವಾದಗಳನ್ನು ಸೃಷ್ಟಿಸಬಾರದು ಎಂದರು.

ದಸರಾ ಕಾರ್ಯಕ್ರಮಗಳ ಪೋಸ್ಟರ್ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಮೈಸೂರು ಅರಸರ ಭಾವಚಿತ್ರಗಳನ್ನು ಬಳಸಲು ರಾಜವಂಶಸ್ಥರ ಅನುಮತಿ ಇಲ್ಲದೆ ಮಾಡಲು ಸಾಧ್ಯವಿಲ್ಲ. ಈ ಕಾರಣದಿಂದಾಗಿ ಮೈಸೂರು ಸಂಸ್ಥಾನದ ಯಾವುದೇ ಅರಸರ ಭಾವಚಿತ್ರಗಳನ್ನು ಮುದ್ರಿಸಿಲ್ಲ.ಈ ಬಗ್ಗೆ ರಾಜವಂಶಸ್ಥರೊಂದಿಗೆ ಮಾತನಾಡಿ ಅನುಮತಿ ಪಡೆಯುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲಾ ವಿಶ್ವವಿದ್ಯಾನಿಲಯಗಳ ಮಾಹಿತಿ ಹಾಗೂ ಅಲ್ಲಿ ದೊರೆಕುವ ಸೌಲಭ್ಯ ಸೇರಿದಂತೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು.

ಸಾರ್ವಜನಿಕರಲ್ಲಿ ಉನ್ನತ ಶಿಕ್ಷಣ ಇಲಾಖೆ ಹೇಗೆ ಕಾರ್ಯನಿರ್ವಹಿಸುವತ್ತಿದೆ ಎಂಬ ಮಾಹಿತಿ ಇಲ್ಲ. ಇಲಾಖೆ ವ್ಯಾಪ್ತಿಯ 19 ವಿವಿಗಳಲ್ಲಿ ಎಲ್ಲಾ ಕೋರ್ಸ್‌ಗಳಿಗೆ ಸಂಬಂಧಿಸಿದ ಮಾಹಿತಿ ನೀಡುವ ಮೂಲಕ ಜನರ ಹತ್ತಿರಕ್ಕೆ ಕೊಂಡೊಯ್ಯಲಾಗುವುದು. ರಾಜ್ಯ ವಿವಿಗಳಲ್ಲಿನ ಅಗತ್ಯವಿರುವ ಕೋರ್ಸ್, ಮೂಲ ಸೌಲಭ್ಯಗಳ ಸಮಗ್ರ ಮಾಹಿತಿ ಒಳಗೊಂಡ ಮೊಬೈಲ್ ಅಪ್ಲಿಕೇಷನ್ ರೂಪಿಸಲಾಗುತ್ತಿದ್ದು, ಮೊಬೈಲ್ ಅಪ್ಲಿಕೇಷನ್‌ನಿಂದ ಉನ್ನತ ಶಿಕ್ಷಣಕ್ಕಾಗಿ ದೇಶ, ವಿದೇಶ ವಿದ್ಯಾರ್ಥಿಗಳು ರಾಜ್ಯಕ್ಕೆ ಆಗಮಿಸಲು ವಿದ್ಯಾರ್ಥಿಗಳಿಗೆ ಸಹಾಯಕವಾಗಲಿದೆ, ಅ. 5ರೊಗಳಗೆ ಮೊಬೈಲ್ ಅಪ್ಲಿಕೇಷನ್ ಸಿದ್ಧವಾಗಲಿದೆ. ಇದರಿಂದ ಶೈಕ್ಷಣಿಕ ವಲಯಕ್ಕೆ ಬಹಳಷ್ಟು ಅನುಕೂಲವಾಗಲಿದೆ ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English