ನಲ್ಗೊಂಡ: ಕಳೆದ ಮೂರು ದಿನಗಳ ಹಿಂದೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮಿರ್ಯಾಲಗೂಡದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊಲೆ ಮಾಡಿರುವ ವ್ಯಕ್ತಿ ಐಎಸ್ಐ ಉಗ್ರ ಸಂಘಟನೆ ಜತೆ ಸಂಪರ್ಕದಲ್ಲಿದ್ದು, ಆತನಿಗೆ ಬರೋಬ್ಬರಿ 1 ಕೋಟಿ ಹಣ ನೀಡಲು ಆಫರ್ ನೀಡಲಾಗಿತ್ತು ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ.
ಆರೋಪಿಯನ್ನ ಇಂದು ಬಿಹಾರ ಪೊಲೀಸರು ಬಂಧಿಸಿದ್ದು, ಆತನ ವಿಚಾರಣೆ ನಡೆಸಿದಾಗ ಕೆಲವೊಂದು ಮಹತ್ವದ ಮಾಹಿತಿ ಹೊರಬಿದ್ದಿವೆ. 23 ವರ್ಷದ ಇಂಜಿನಿಯರ್ ಆಗಿದ್ದ ವ್ಯಕ್ತಿಯೇ ಈ ಕೃತ್ಯವೆಸಗಿದ್ದ. ಈ ಹತ್ಯೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇಲ್ಲಿ ಸಿಕ್ಕ ದೃಶ್ಯಾವಳಿಗಳನ್ನೇ ಆಧರಿಸಿ ಆತನ ಬಂಧನ ಮಾಡಲಾಗಿದೆ.
ವ್ಯಕ್ತಿಯ ಕೊಲೆ ಮಾಡುವುದಕ್ಕಾಗಿ ಅವರಿಗೆ 1 ಕೋಟಿ ಹಣ ನೀಡುವುದಾಗಿ ಆಫರ್ ನೀಡಲಾಗಿತ್ತು. ಈ ಆಫರ್ನ ಭಾಗವಾಗಿ ಮೊದಲು, 18 ಲಕ್ಷ ರೂ ನೀಡಲಾಗಿತ್ತಂತೆ. ಹಣ ಪಡೆದುಕೊಂಡಿದ್ದ ಇಂಜಿನಿಯರ್, ಗರ್ಭಿಣಿ ಪತ್ನಿ ಎದುರೇ ಗಂಡನ ಬರ್ಬರ ಹತ್ಯೆ ಮಾಡಿ ಪರಾರಿಯಾಗಿದ್ದನು.
ಮನೆಯವರ ವಿರೋಧದ ನಡವೆಯೂ ಅಮೃತಾ, ಎಂಟು ತಿಂಗಳ ಹಿಂದೆಯೇ ಪ್ರಣಯ್ ಜೊತೆ ಸಪ್ತಪದಿ ತುಳಿದಿದ್ದರು. ಪ್ರಣಯ್ ಜೊತೆ ಸುಖ ಸಂಸಾರ ನಡೆಸುತ್ತಿದ್ದ ಅಮೃತಾ ಐದು ತಿಂಗಳ ಗರ್ಭಿಣಿ ಸಹ ಆಗಿದ್ದರು.
ಮೆಲ್ಜಾತಿಯ ಹುಡುಗಿ ಜತೆ ಕೆಳೆ ಜಾತಿ ಹುಡುಗ ಮದುವೆಯಾಗಿದ್ದ ಕಾರಣ ಆಕ್ರೋಶಗೊಂಡಿದ್ದ ಅಮೃತಾ ತಂದೆ ಈ ಹಿಂದಿನಿಂದಲೂ ಅವರ ಮೇಲೆ ಕೋಪವಿಟ್ಟುಕೊಂಡಿದ್ದರು. ಸಮಯಕ್ಕಾಗಿ ಕಾಯ್ದು ಕುಳಿತ್ತಿದ್ದ ಅವರು ಮೊನ್ನೆ ಅಮೃತಾ ಗಂಡನ ಕೊಲೆ ಮಾಡಿಸಿದ್ದರು. ಇದರಲ್ಲಿ ಕೆಲ ರಾಜಕಾರಣಿಗಳ ಕೈವಾಡ ಸಹ ಇದೆ ಎಂದು ತಿಳಿದು ಬಂದಿದೆ. ಜತೆಗೆ ಅಮೃತಾ ತಂದೆ ರಾಜಕೀಯದಲ್ಲಿರುವ ಕಾರಣ ಕೆಲವೊಂದು ಕಾಣದ ಕೈಗಳು ಶಾಮೀಲಾಗಿವೆ ಎಂದು ಸ್ವತಃ ಮಗಳೇ ಆರೋಪಿಸಿದ್ದಾಳೆ.
ನಾನು ಮದುವೆ ಆಗಿರುವುದಾಗಲಿ ಮತ್ತು ಗರ್ಭಿಣಿಯಾಗಿದ್ದಾಗಲಿ ನಮ್ಮ ತಂದೆಗೆ ಇಷ್ಟವಿರಲಿಲ್ಲ. ನಾನು ಗರ್ಭಿಣಿ ಆಗಿರುವ ಸುದ್ದಿ ತಾಯಿಗೆ ತಿಳಿಸಿದ್ದೇ ಸಹ. ಆದ್ರೆ, ಅವರು ನಿನ್ನ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸು ಎಂದು ಹೇಳಿದ್ದರು. ಆದ್ರೆ ಅದೇ ನಮ್ಮ ತಂದೆಗೆ ಈ ವಿಷಯ ತಿಳಿಸಿದ್ದಾಗ ಗರ್ಭಪಾತ ಮಾಡ್ಸು ಎಂದು ಹೇಳಿದ್ದರು ಅಂತಾ ಅಮೃತಾ ಹೇಳಿದ್ದರು.
‘ನಾವು ಎಲ್ಲೆ ಇದ್ದರು ನಮ್ಮ ತಂದೆಗೆ ಮಾಹಿತಿ ಗೊತ್ತಾಗುತ್ತಿತ್ತು. ಈ ವಿಷಯ ನಮ್ಮ ತಾಯಿಯೇ ನನ್ನ ಬಳಿ ಹೇಳಿದ್ದಾರೆ. ನಮ್ಮ ಮೇಲೆ ತಂದೆ ತೀವ್ರ ನಿಗಾವಹಿಸಿದ್ದರು. ಅಷ್ಟೇ ಅಲ್ಲ ನಿಗಾ ಇಡಲು ಕೆಲ ಹುಡುಗರನ್ನು ನಮ್ಮ ತಂದೆ ನೇಮಕ ಮಾಡಿದ್ದರು ಎಂಬ ಅನುಮಾನ ಇತ್ತು ಎಂದು ಅಮೃತಾ ಹೇಳಿದ್ದಾರೆ.
‘ನಿನ್ನೆ ಪ್ರಣಯ್ ಮೇಲೆ ಏಕಾಏಕಿ ನಮ್ಮ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ದುಷ್ಕರ್ಮಿಯೊಬ್ಬ ನನ್ನ ಗಂಡನನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ. ನನ್ನ ಮೇಲೆಯೂ ಹಲ್ಲೆ ನಡೆಯಿತು. ಕೂಡಲೇ ನನ್ನ ಗಂಡ ಕೊಲೆಯಾದ ಸುದ್ದಿಯನ್ನು ನಮ್ಮ ತಂದೆಗೆ ತಿಳಿಸಿದೆ. ಆದರೆ, ಅವರು ನಿನ್ನ ಧ್ವನಿ ಸರಿಯಾಗಿ ಕೇಳುತ್ತಿಲ್ಲ ಎಂದು ಫೋನ್ ಕಟ್ ಮಾಡಿದರು’ ಅಂತಾ ಅಮೃತಾ ತಮ್ಮ ತಂದೆಯ ವಿರುದ್ಧ ಆರೋಪಿಸಿದ್ದರು.
ಇದೀಗ ಆರೋಪಿ ಬಂಧನ ಮಾಡಿರುವ ಪೊಲೀಸರು ವಿಚಾರಣೆ ನಡೆಸಿದಾಗ ದೊಡ್ಡ ದೊಡ್ಡ ಮಾಹಿತಿ ಬಹಿರಂಗವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೃತಾ ತಂದೆಯ ವಿರುದ್ಧ ಸಹ ಕೇಸ್ ದಾಖಲಾಗಿದೆ ಎಂದು ತಿಳಿದು ಬಂದಿದೆ.
Click this button or press Ctrl+G to toggle between Kannada and English