ಚಿಕ್ಕಮಗಳೂರು: ಮಾಜಿ ನಕ್ಸಲ್ ನಿಲಗುಳಿ ಪಧ್ಮನಾಭರನ್ನು ನಾಲ್ಕು ತಿಂಗಳ ಬಳಿಕ ಬೆಳಗಾವಿ ಜಿಲ್ಲೆಯ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿದೆ.
ಕುಂದಾಪುರ ತಾಲೂಕಿನ ಮಡಮಕ್ಕಿ ಬಳಿ ಸೇತುವೆ ಧ್ವಂಸ, ನಕ್ಸಲ್ ಬ್ಯಾನರ್ ಕಟ್ಟಿದ ಆರೋಪ ಮತ್ತು ಕುದುರೆಮುಖದಲ್ಲಿ ವ್ಯಕ್ತಿ ಮೇಲೆ ಹಲ್ಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ಪಧ್ಮನಾಭರನ್ನು ಬಂಧಿಸಲಾಗಿತ್ತು. ಈ ಪ್ರಕರಗಳಲ್ಲೀಗ ಕುಂದಾಪುರ, ಚಿಕ್ಕಮಗಳೂರು ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ.
ಗೌರಿಲಂಕೇಶ್ ನೇತೃತ್ವದಲ್ಲಿ, ನಕ್ಸಲ್ ಶರಣಾಗತಿ ಪ್ಯಾಕೇಜ್ ಅಡಿಯಲ್ಲಿ ನಿಲಗುಳಿ ಪಧ್ಮನಾಭ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಿದ್ದರು. ಈ ಮೂಲಕ ಅವರು ಸಮಾಜದ ಮುಖ್ಯವಾಹಿನಿಗೆ ಬಂದಿದ್ದರು.
ಆದ್ರೆ ಕಳೆದ ನಾಲ್ಕು ತಿಂಗಳ ಹಿಂದೆ ಉಡುಪಿ ನ್ಯಾಯಾಲಯದ ಮುಂಭಾಗ ಕುಂದಾಪುರ ಪೊಲೀಸರು ಮತ್ತೆ ಬಂಧಿಸಿದ್ದರು. ಇದೀಗ ನಿರೀಕ್ಷಣಾ ಜಾಮೀನು ನೀಡಿ ಬಿಡುಗಡೆ ಮಾಡಲಾಗಿದೆ.
Click this button or press Ctrl+G to toggle between Kannada and English