ಮಂಗಳೂರು : ಹಿಂದೂ ಯುವಸೇನೆಯ 26ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಕೇಂದ್ರ ಮೈದಾನಿನ ಛತ್ರಪತಿ ಶಿವಾಜಿ ಮಂಟಪದಲ್ಲಿ ಬುಧವಾರ ಸಂಜೆ ಬಹಳ ವಿಜೃಭಂಣೆಯಿಂದ ಜರಗಿತು.
ಕಳೆದ 7 ದಿನಗಳಿಂದ ಪೂಜಿಸುತ್ತಿದ್ದ ಗಣಪತಿಯ ಉತ್ಸವ ಮೂರ್ತಿಯನ್ನು ಮಹಾಪೂಜೆಯೊಂದಿಗೆ ಸಂಜೆ 6.40 ರಿಂದಲೇ ವೈಭಯುತ ಶೋಭಾಯಾತ್ರೆ ಗೆ ಅಣಿಗೊಳಿಸಲಾಯಿತು. ಬಳಿಕ ಆಕರ್ಷಕ ಮೆರವಣಿಗೆಯೊಂದಿಗೆ ಗಣಪತಿಯ ಶೋಭಾಯಾತ್ರೆ ನಡೆಯಿತು.
ಬುಧವಾರ ಬೆಳಗ್ಗಿನಿಂದಲೇ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಹಾಗೂ ಪೂಜಾಕಾರ್ಯಕ್ರಮಗಳು ನಡೆದವು, ಮಹಾಪೂಜೆ ಹಾಗೂ ಪ್ರಸಾದ ವಿತರಣೆಯ ಬಳಿಕ ವೈಭವದ ಶೋಭಯಾತ್ರೆ ಕೇಂದ್ರ ಮೈದಾನದಿಂದ ಹೊರಟು ಕ್ಲಾಕ್ ಟವರ್ ಮಾರ್ಗವಾಗಿ, ಹಂಪನ್ ಕಟ್ಟೆ ಮುಖ್ಯ ಸಿಗ್ನಲ್ ವೃತ್ತದ ಮೂಲಕ ಕೆ.ಎಸ್.ರಾವ್.ರಸ್ತೆ, ನವಭಾರತ್ ಸರ್ಕಲ್, ಡೊಂಗರಕೇರಿ, ನ್ಯೂಚಿತ್ರ ಟಾಕೀಸ್, ರಥಬೀದಿಯಾಗಿ ಗಣಪತಿಯ ಉತ್ಸವ ಮೂರ್ತಿಯನ್ನು ಶ್ರೀ ಕುಡ್ತೇರಿ ಮಹಮ್ಮಾಯಿ ದೇವಸ್ಥಾನದ ಕೆರೆಯಲ್ಲಿ ವಿಸರ್ಜಿಸಲಾಯಿತು.
ಸಾವಿರಾರು ಭಕ್ತರು ತಡರಾತ್ರಿಯವರೆಗೂ ಮೆರವಣಿಗೆಯಲ್ಲಿ ಪಾಲ್ಗೊಂಡು ಪುನೀತರಾದರು. ಕೇರಳದ ಚೆಂಡೆವಾದನ, ನಾಸಿಕ್ ಬ್ಯಾಂಡ್, ವಿವಿಧ ವಿನ್ಯಾಸದ ಟ್ಯಾಬ್ಲೊಗಳು, ಸ್ಥಭ್ದ ಚಿತ್ರಗಳು, ವಾದ್ಯ ಘೋಷಗಳೊಂದಿಗೆ ಗಣೇಶನ ಮೆರವಣಿಗೆ ಸಾಗಿತು. ಈ ಸಂದರ್ಭದಲ್ಲಿ ಆಕರ್ಷಕ ಸಿಡಿಮದ್ದು ಪ್ರದರ್ಶನ್ನು ಏರ್ಪಡಿಸಲಾಗಿತ್ತು.
ಗಣೇಶೋತ್ಸವ ಸಮಿತಿ ಗೌರವ ಅಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ, ಅಧ್ಯಕ್ಷ ಶಶಿಕಾಂತ್ ನಾಗ್ವೇಕರ್, ಪ್ರಧಾನ ಕಾರ್ಯದರ್ಶಿ ಶ್ರೀ ರಾಮ ಚಂದ್ರ ಚೌಟ ಪದವು, ಹಿಂದೂ ಯುವಸೇನೆಯ ಮುಖಂಡರು ಹಾಗೂ ಸಂಘಟನೆಯ ಮತ್ತಿತರ ಪಧಾಧಿಕಾರಿಗಳು, ಸದಸ್ಯರು ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಈ ಬಾರಿ ವೆನ್ಲಾಕ್ ಸರಕಾರಿ ಆಸ್ಪತ್ರೆ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಸಹಭಾಗಿತ್ವ ದೊಂದಿಗೆ ಅಶಕ್ತರಿಗೆ ಹಾಗೂ ಬಡರೋಗಿಗಳಿಗೆ ನೆರವಾಗುವ ಉದ್ದೇಶದಿಂದ ರಕ್ತದಾನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಸುಮಾರು 506 ಕಾರ್ಯಕರ್ತರು ರಕ್ತದಾನ ಮಾಡುವ ಮೂಲಕ ರಕ್ತದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
Click this button or press Ctrl+G to toggle between Kannada and English