ಬೆಂಗಳೂರು: ಮಂತ್ರಿ ಅಲ್ವೈನ್ ಅಪಾರ್ಟ್ಮೆಂಟ್ನಿಂದ ಜಿಗಿದು ವೈದ್ಯನ ಪತ್ನಿ ಮೃತಪಟ್ಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಮೃತ ಸೋನಾಲ್ ಅಗರವಾಲ್ ಬಳಿ ಎಂಟು ನಕಲಿ ಕೀ ಬಂಚ್ ಪತ್ತೆಯಾಗಿರುವ ಅಂಶ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ ಎನ್ನಲಾಗ್ತಿದೆ.
ಅಪಾರ್ಟ್ಮೆಂಟ್ ನ 505 ನೇ ಫ್ಲ್ಯಾಟ್ನಲ್ಲಿ ವಾಸವಿದ್ದ ಸೋನಾಲ್ ಅಕ್ಕಪಕ್ಕದಲ್ಲಿದ್ದ ಫ್ಲ್ಯಾಟ್ ಗಳ ನಕಲಿ ಕೀ ಮಾಡಿಸಿಕೊಂಡಿದ್ದರು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಸೆ.16ರಂದು ನಡೆದಿದ್ದ ಘಟನೆ ಸೋನಾಲ್ ಹಾಗೂ ಅವರ ಪತಿ ವೈದ್ಯ ಅವಿನಾಶ್ ವಾಸವಿದ್ದ ಅಪಾರ್ಟ್‌ಮೆಂಟ್ ಸಮುಚ್ಚಯದ 505ನೇ ಫ್ಲ್ಯಾಟ್‌ನಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಲ್ಲಿ ಸೋನಾಲ್, ನಕಲಿ ಕೀ ಗಳನ್ನು ಮಾಡಿಟ್ಟುಕೊಂಡಿದ್ದರು. ಅವುಗಳು ಅಪಾರ್ಟ್‌ಮೆಂಟ್ ಸಮುಚ್ಚಯದ ಕೆಲವು ಫ್ಲ್ಯಾಟ್‌ಗಳ ಕೀಗಳಿಗೆ ಹೋಲಿಕೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋನಾಲ್ ಬಳಿ 20 ಡಾಲರ್‌ನ ನಾಲ್ಕು, 10 ಡಾಲರ್‌ನ ಆರು ನೋಟು, ಮೂರು ಚಿನ್ನದ ಉಂಗುರ, ಮೂರು ಚಿನ್ನದ ಮೂಗುತಿ ಸಿಕ್ಕಿದ್ದವು.
ಗಣೇಶ ಹಬ್ಬ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್ ಮಾಲೀಕರು ಕಾರ್ಯಕ್ರಮ ಏರ್ಪಡಿಸಿದ್ದರು. ಈ ವೇಳೆ ನಕಲಿ ಕೀ ಬಳಸಿ 501ನೇ ಫ್ಲ್ಯಾಟ್‌ಗೆ ಸೋನಾಲ್ ನುಗ್ಗಿದ್ದರು. ಕೆಲ ನಿಮಿಷ ಬಳಿಕ ಮಾಲೀಕ ಪ್ರಸನ್ನರ ಮಾವ, ಫ್ಲ್ಯಾಟ್‌ಗೆ ಹೋಗಿ ಟಿ.ವಿ ನೋಡುತ್ತ ಕುಳಿತುಕೊಂಡಿದ್ದರು. ಅಲ್ಲಿಯೇ ಬೆಡ್ ರೂಮ್‌ನಲ್ಲಿದ್ದರೆನ್ನಲಾದ ಸೋನಾಲ್, ಮಾಲೀಕನನ್ನು ಕಂಡು ಗಾಬರಿಯಿಂದ ಕಿಟಕಿಯಿಂದ ಜಿಗಿದಿದ್ದರು. ನಂತರವೇ ಕೆಳಗೆ ಬಿದ್ದು ಮೃತಪಟ್ಟರು ಎಂಬ ಸಂಗತಿ ಇದುವರೆಗಿನ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿ ಓರ್ವರು ತಿಳಿಸಿದ್ದಾರೆ.
Click this button or press Ctrl+G to toggle between Kannada and English