ಮಂಗಳೂರು: ದಿನಾಂಕ 01-09-2018ರಂದು ಅಮೇರಿಕಾದ ಡಲ್ಲಾಸ್‌ನಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿ ಮಂಗಳೂರಿನ ಖ್ಯಾತ ಲೆಕ್ಕ ಪರಿಶೋಧಕರಾದ ಎಸ್. ಎಸ್. ನಾಯಕ್ ಇವರು ಮಂಗಳೂರಿನ ಪ್ರತಿನಿಧಿಯಾಗಿ ಭಾಗವಹಿಸಿದರು. ವೃತ್ತಿಯಲ್ಲಿ ಲೆಕ್ಕ ಪರಿಶೋಧಕರಾದರೂ ಪ್ರವೃತ್ತಿಯಲ್ಲಿ ಸಾಹಿತ್ಯ, ಹಾಸ್ಯ, ಜೀವನ ಪ್ರೀತಿ ಮುಂತಾದವುಗಳ ಕುರಿತು ಅಭಿರುಚಿ ಹೊಂದಿರುವ ಇವರು ಅಮೇರಿಕಾದಲ್ಲಿ ನೆರೆದಿರುವ ಕನ್ನಡಿ ಗಜನಸ್ತೋಮವನ್ನುತಮ್ಮ ಹಾಸ್ಯ ಚಟಾಕಿಗಳ ಮೂಲಕ ನಗೆಗಡಲಲ್ಲಿ ತೇಲಿಸಿದರು.
ಅಮೇರಿಕಾದಲ್ಲಿ ನಡೆಯುವ ಸಾಂಸ್ಕೃತಿಕ ಹಾಗೂ ಭಾಷಾ ಬೆಳವಣಿಗೆಯ ಕಾರ್ಯಕ್ರಮಗಳು ಸದಾ ಮುಂದುವರಿಯಲಿ ಹಾಗೂ ಮುಂದೆ ನಡೆಯುವ ಇಂತಹ ಕಾರ್ಯಕ್ರಮಗಳಲ್ಲಿ ತಾವು ಭಾಗವಹಿಸಿ ಜನರಲ್ಲಿತಮ್ಮ ಭಾಷೆ ಸಂಸ್ಕೃತಿ, ನೆಲ, ಜಲ ಇವುಗಳ ಬಗ್ಗೆ ಅಭಿರುಚಿ, ಒಲವು ಮೂಡಿಸುವ ಕಾರ್ಯ ನಡೆಯುತ್ತಿರಬೇಕು ಎಂದು ಅಭಿಪ್ರಾಯ ಪಟ್ಟರು.
Click this button or press Ctrl+G to toggle between Kannada and English