ಮಂಗಳೂರು : ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನವನ್ನು ರಾಜ್ಯ ಸರ್ಕಾರವು ಸರ್ವೋಚ್ಚ ನ್ಯಾಯಾಲಯದ ಮಧ್ಯಂತರ ಆದೇಶದ ವಿರುದ್ಧವಾಗಿ ದೇವಸ್ಥಾನದ ಆಡಳಿತವನ್ನು ವಶಪಡಿಸಿಕೊಳ್ಳುವುದು ಕಾನೂನುಬಾಹಿರ ಕೃತ್ಯ ಮಾತ್ರವಲ್ಲದೇ, ಅದು ಸರ್ವೋಚ್ಚ ನ್ಯಾಯಾಲಯದ ಅಪಮಾನವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸಿದೆ.
2008 ರಿಂದ ರಾಮಚಂದ್ರಪುರ ಮಠದ ಶ್ರೀ ರಾಘವೇಶ್ವರ ಶ್ರೀಗಳ ನೇತೃತ್ವದಲ್ಲಿ ಅತ್ಯುತ್ತಮ ರೀತಿಯಲ್ಲಿ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನದ ಆಡಳಿತವನ್ನು ನಡೆಸಿಕೊಂಡು ಬಂದಿದೆ ಮತ್ತು ಉತ್ತಮ ರೀತಿಯಲ್ಲಿ ದೇವಸ್ಥಾನದ ಅಭಿವೃದ್ಧಿಯೂ ಆಗಿದೆ. ರಾಜ್ಯ ಸರ್ಕಾರದ ಬಳಿ ಕರ್ನಾಟಕದಲ್ಲಿ 24,000ಕ್ಕೂ ಅಧಿಕ ದೇವಸ್ಥಾನಗಳು ಇದ್ದು, ಇದರಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಇತ್ತೀಚೆಗೆ ಮುಜರಾಯಿ ಇಲಾಖೆಯ ನಿಯಮಾವಳಿಯ ವಿರುದ್ಧವಾಗಿ ದೇವಸ್ಥಾನದ 12.5 ಕೋಟಿ ರೂಗಳನ್ನು ಮುಖ್ಯಮಂತ್ರಿಗಳ ನಿಧಿಗೆ ಮನಸ್ಸಿಗೆ ಬಂದಂತೆ ವರ್ಗಾವಣೆ ಮಾಡಲಾಯಿತು. ರಾಜ್ಯ ಸರ್ಕಾರವು ನಡೆಸುವ ರಾಜ್ಯದ ಅನೇಕ ದೇವಸ್ಥಾನಗಳಲ್ಲಿ ಭ್ರಷ್ಟಾಚಾರ ಮಿತಿಮೀರಿ ನಡೆಯುತ್ತಿದೆ. ಆಂಧ್ರಪ್ರದೇಶ ಸರ್ಕಾರವು ನಡೆಸುತ್ತಿರುವ ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ನೂರಾರು ಕೋಟಿ ಮೌಲ್ಯದ ದೇವರ ಅಮೂಲ್ಯ ಆಭರಣಗಳು ಕಾಣೆಯಾಗಿವೆ ಎಂಬ ಪ್ರಕರಣ ಜರುಗಿತು. ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳು ತುಂಬಿರುವ ಸರ್ಕಾರದಿಂದ ಹಿಂದೂ ದೇವಸ್ಥಾನಗಳ ಉತ್ತಮ ಪ್ರಾಮಾಣಿಕ ಆಡಳಿತ ಮಾಡಲು ಸಾಧ್ಯವೇ? ದಿನದಿಂದ ದಿನಕ್ಕೆ ಸರ್ಕಾರವು ನಡೆಸುತ್ತಿರುವ ದೇವಸ್ಥಾನಗಳ ಸ್ಥಿತಿ ಹದಗೆಡುತ್ತಿದೆ. ಒಟ್ಟಾರೆ ಜಾತ್ಯಾತೀತ ಸರ್ಕಾರ ಕೇವಲ ಹಿಂದೂ ದೇವಸ್ಥಾನಗಳನ್ನು ಮಾತ್ರ ವಶಪಡಿಸಿಕೊಳ್ಳುತ್ತಿದೆ. ಆದರೆ ಅನ್ಯಮತೀಯರ ಧಾರ್ಮಿಕ ಸ್ಥಳಗಳ ವಿಷಯದಲ್ಲಿ ಮೂಗು ತೂರಿಸುವುದಿಲ್ಲ. ಇದು ಹಿಂದೂಗಳ ಮೇಲೆ ಮಾಡಿದ ಅನ್ಯಾಯವಾಗಿದೆ. ಹಾಗಾಗಿ ಸರ್ಕಾರವು ಕೂಡಲೇ ಗೋಕರ್ಣ ಮಹಾಬಲೇಶ್ವರ ದೇವಸ್ಥಾನವನ್ನು ಪುನಃ ಶ್ರೀ ರಾಮಚಂದ್ರಪುರ ಮಠಕ್ಕೆ ನೀಡಬೇಕು ಇಲ್ಲವಾದಲ್ಲಿ ರಾಜ್ಯವ್ಯಾಪಿ ತೀವ್ರ ಆಂದೋಲನ ಮಾಡಲಾಗುವುದು ಎಂದು ಹಿಂದೂ ಜನಜಾಗೃತಿ ಸಮಿತಿ ಎಚ್ಚರಿಸಿದೆ.
Click this button or press Ctrl+G to toggle between Kannada and English
September 22nd, 2018 at 13:21:19
ಸರಕಾರ ಚರ್ಚ್ ಮತ್ತು ಮಸೀದಿ ಗಳನು ವಶ ಪಡಿಸುವುದಿಲ್ಲ. ಸರಕಾರದಿಂದ ಗೋಕರ್ಣದ ಆಡಳಿತ ಮಂಡಳಿ ಸರಕಾರದಿಂದ ಹಣ ಸಹಾರ ಕೇಳಿದೆಯೋ.? ಈ ರಾಜಕರಣಿಗಳು ಟೇಕ್ಸ್ ಕಟ್ಟುವವರ ಹಣ ತಿಂದು ಹೊಟ್ಟೆ ತುಂಬಲಿಲ್ಲವೋ.? ಇನ್ನು ಹಿಂದೂ ದೆವಸ್ಥಾನ ಗಳನ್ನೂ ಲೂಟಿ ಮಾಡಲಾರಂಭಿಸಿದರು.
ಗಜನೀ ಮೊಹಮ್ಮದ್ ನಂತಹ ಮೊಗಲಿಗಲಿಂದಲೂ ಕ್ರೂರರು ಇವರು. ಇಂಥವರ ಸಂತಾನ ನಾಶವಾಗಲಿ. ಎಲ್ಲಾ ಹಿಂದೂ ಸಮೂಹ ಮೇಲು ಕೀಳು ಎನ್ನದೆ ಇದರ ತೀವ್ರ ವಿರೋಧ ಮಾಡಬೇಕು.