ಮಂಗಳೂರು: ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ ಆಗಿರುವುದರಿಂದ ಕರ್ನಾಟಕ ಮತ್ತು ಕೇರಳದ ಗಡಿ ಭಾಗವಾದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ತಲಪಾಡಿಯಲ್ಲಿ ಕೇರಳದ ವಾಹನ ಸವಾರರಿಗೆ ಸಂತಸ ತಂದಿದೆ.
ಕೇರಳದಿಂದ ಉತ್ತರ ಭಾರತಕ್ಕೆ ಸಂಪರ್ಕಿಸುವ ಹೆದ್ದಾರಿಯಲ್ಲಿರುವ ತಲಪಾಡಿಯಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ತಲಪಾಡಿಯ 2 ಪೆಟ್ರೋಲ್ ಪಂಪ್ನಲ್ಲಿ 1 ಕರ್ನಾಟಕ ವ್ಯಾಪ್ತಿಯಲ್ಲಿದೆ. ಇನ್ನೊಂದು ಕೇರಳ ರಾಜ್ಯದಲ್ಲಿದೆ. ಅರ್ಧ ಕಿಲೋ ಮೀಟರ್ ಅಂತರದಲ್ಲಿರುವ ಈ ಎರಡು ಪೆಟ್ರೋಲ್ ಪಂಪ್ನಲ್ಲಿ ಇದೀಗ ಬೆಲೆ ವ್ಯತ್ಯಾಸವಾಗಿದ್ದು, 1 ಪೆಟ್ರೋಲ್ ಪಂಪ್ಗೆ ಭರ್ಜರಿ ವ್ಯಾಪಾರ, ಇನ್ನೊಂದು ಪೆಟ್ರೋಲ್ ಪಂಪ್ಗೆ ಭಾರಿ ನಷ್ಟ ತಂದಿದೆ.
ಕೇರಳ ರಾಜ್ಯಕ್ಕೆ ಸೇರಿದ ಪೆಟ್ರೋಲ್ ಪಂಪ್ಗಿಂತ ಕರ್ನಾಟಕ ರಾಜ್ಯಕ್ಕೆ ಸೇರಿದ ಪೆಟ್ರೋಲ್ ಪಂಪ್ನಲ್ಲಿ ಡೀಸೆಲ್ಗೆ ಐದು ರೂಪಾಯಿ, ಪೆಟ್ರೋಲಿಗೆ ಎರಡು ರೂಪಾಯಿ ಕಡಿಮೆ ದರವಿದೆ. ಈ ಕಾರಣದಿಂದ ಕೇರಳದ ಪೆಟ್ರೋಲ್ ಬಂಕಿನಲ್ಲಿ ಪೆಟ್ರೋಲ್ ಹಾಕಿಸಲು ಯಾರೂ ಬರುತ್ತಿಲ್ಲ. ಅದೇ 500 ಮೀಟರ್ ದೂರದಲ್ಲಿರುವ ಕರ್ನಾಟಕ ಪೆಟ್ರೋಲ್ ಪಂಪ್ನಲ್ಲಿ ಪೆಟ್ರೋಲ್ ಹಾಕಿಸಲು ವಾಹನಗಳು ಬರುತ್ತಿದೆ. ಹೀಗಾಗಿ ಕೇರಳದ ಪೆಟ್ರೋಲ್ ಪಂಪ್ ಬಿಕೋ ಎನ್ನುತ್ತಿದ್ದರೆ, ಕರ್ನಾಟಕದ ಪೆಟ್ರೋಲ್ ಪಂಪ್ನಲ್ಲಿ ವಾಹನಗಳು ಪೆಟ್ರೋಲ್ ಹಾಕಿಸಲು ಕಾಯುವಂತಹ ಪರಿಸ್ಥಿತಿ ಬಂದಿದೆ.
ಕರ್ನಾಟಕದ ಪೆಟ್ರೋಲ್ ಪಂಪ್ನಲ್ಲಿ ಕೇರಳದ ಲಾರಿ, ಬಸ್ಸು, ಕಾರು, ದ್ವಿಚಕ್ರ ವಾಹನಗಳು ಪೆಟ್ರೋಲ್-ಡೀಸೆಲ್ ಹಾಕಿಸಿಕೊಂಡು ಹೋಗುತ್ತಿವೆ. ಇದರಿಂದ ಕರ್ನಾಟಕದ ಪೆಟ್ರೋಲ್ ಪಂಪ್ನಲ್ಲಿ ಭರ್ಜರಿ ವ್ಯಾಪಾರ ಇದ್ದರೆ, ಕೇರಳದ ಪೆಟ್ರೋಲ್ ಪಂಪ್ ನಷ್ಟದ ಹಾದಿಯಲ್ಲಿದೆ.
Click this button or press Ctrl+G to toggle between Kannada and English