ಮಂಗಳೂರು: ನಮ್ಮ ಜಿಲ್ಲೆಯಲ್ಲಿ ದಸರಾ ಸಮಯದಲ್ಲಿ ಮಕ್ಕಳಿಗೆ ರಜೆ ನೀಡುವುದು ಹಿಂದಿನ ಕಾಲದಿಂದ ನಡೆದುಬಂದ ಪದ್ದತಿಯಾಗಿದ್ದು, ಮಳೆಗಾಲದ ಪ್ರಕೃತಿ ವಿಕೋಪಕ್ಕೆ ನೀಡಿದ ರಜೆಯನ್ನು ಈ ರಜೆಯಲ್ಲಿ ಕಡಿತಗೊಳಿಸಲು ಸರಕಾರ ಹೊರಡಿಸಿರುವ ಸುತ್ತೋಲೆಯನ್ನು ನಾವು ಖಂಡಿಸುವ ಮೂಲಕ ಅಕ್ಟೋಬರ್ 7 ರಿಂದ 21 ರ ವರಗೆ ನಿಗದಿಗೊಳಿಸಿದ ರಜೆಯನ್ನು ನೀಡಬೇಕೆಂದು ವಿಶ್ವಹಿಂದೂ ಪರಿಷದ್ ಬಜರಂಗದಳ ಆಗ್ರಹಿಸಿದೆ
ನವರಾತ್ರಿಗೆ ನೀಡುವ ರಜೆಯನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸಬಾರದೆಂದು ಮಾನ್ಯ ಜಿಲ್ಲಾಧಿಕಾರಿಯವರಿಗೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣಾಧಿಕಾರಿಯವರಿಗೆ ಮನವಿ ನೀಡಿತು
ಮಕ್ಕಳ ಶಿಕ್ಷಣ ಸರಿತೂಗಿಸಲು ಶನಿವಾರ ಹೆಚ್ಚಿನ ತರಗತಿಗಳನ್ನು ನಡೆಸಲು ಮನವಿ ಮಾಡಿತು, ಜೊತೆಗೆ ಕ್ರಿಸ್ಮಸ್ ಹಬ್ಬದ ರಜೆಯನ್ನು ನೀಡುವ ವಿಚಾರದಲ್ಲಿ ಆಯಾಯ ಶಾಲಾ ಕಾಲೇಜುಗಳ ವಿವೇಚನೆಗೆ ಬಿಟ್ಟನಿರ್ಣಯ ಎಂದಿರುವ ಸರಕಾರ ನವರಾತ್ರಿ ಹಬ್ಬದ ರಜೆಯನ್ನು ಕಡಿತಗೊಳಿಸಲು ಸುತ್ತೋಲೆ ಹೊರಡಿಸಿರುವುದು ಈ ರಾಜ್ಯಸರಕಾರ ಇಬ್ಬಗೆಯ ನೀತಿಯನ್ನು ಅನುಸರಿಸುತ್ತಿದ್ದು ಇದನ್ನು ವಿಶ್ವಹಿಂದೂ ಪರಿಷದ್ ಬಜರಂಗದಳ ಖಂಡಿಸಿತು
ಈ ಸಮಯದಲ್ಲಿ ವಿಶ್ವಹಿಂದೂ ಪರಿಷದ್ ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್, ವಿಶ್ವಹಿಂದೂ ಪರಿಷದ್ ಮಂಗಳೂರು ಜಿಲ್ಲಾಧ್ಯಕ್ಷರಾದ ಜಗದೀಶ್ ಶೇಣವ, ವಿಶ್ವಹಿಂದೂ ಪರಿಷದ್ ಜಿಲ್ಲಾಕಾರ್ಯಧ್ಯಕ್ಷರಾದ ಗೋಪಾಲ್ ಕುತ್ತಾರ್,ವಿಶ್ವಹಿಂದೂ ಪರಿಷದ್ ಮಂಗಳೂರು ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್, ಬಜರಂಗದಳ ಮಂಗಳೂರು ವಿಭಾಗ ಸಂಯೋಜಕ್ ಭುಜಂಗ ಕುಲಾಲ್, ಬಜರಂಗದಳ ಮಂಗಳೂರು ಜಿಲ್ಲಾ ಸಂಯೋಜಕ್ ಪ್ರವೀಣ್ ಕುತ್ತಾರ್ ಉಪಸ್ಥಿತಿ ಇದ್ದರು.
Click this button or press Ctrl+G to toggle between Kannada and English