ಮಂಗಳೂರು: ಕರ್ನಾಟಕ ರಾಜ್ಯ ಬಿಜೆಪಿ ಘಟಕ 2019ರ ಲೋಕಸಭಾ ಚುನಾವಣೆಯಾ 24 ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ತಯಾರು ಮಾಡಿದೆ. ಈ ಪಟ್ಟಿಯ ಪ್ರಕಾರ ದ.ಕ ಜಿಲ್ಲೆಗೆ ಮತ್ತೆ ನಳಿನ್ ಕುಮಾರ್ ಕಟೀಲ್ ಅಭ್ಯರ್ಥಿಯಾಗುವ ಸಾಧ್ಯತೆಯಿದೆ.
ಇನ್ನು ಪಟ್ಟಿ ತಯಾರಾದ ಹಿನ್ನೆಲೆಯಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಆರಂಭಿಸಲಿದ್ದಾರೆ. ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಆದರೆ 4 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದ್ದು, ಯಡಿಯೂರಪ್ಪ ರಾಜೀನಾಮೆಯಿಂದ ತೆರವಾದ ಶಿವಮೊಗ್ಗ, ಶ್ರೀರಾಮುಲು ರಾಜೀನಾಮೆಯಿಂದ ತೆರವಾದ ಬಳ್ಳಾರಿ ಕ್ಷೇತ್ರಕ್ಕೂ ಅಭ್ಯರ್ಥಿ ಅಂತಿಮಗೊಳಿಸಲಾಗಿದೆ. ಎಲ್ಲಾ ಹಾಲಿ ಸಂಸದರಿಗೆ ಟಿಕೆಟ್ ಖಚಿತವಾಗಿದೆ.
ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ:-
ದಕ್ಷಿಣ ಕನ್ನಡ – ನಳೀನ್ ಕುಮಾರ್ ಕಟೀಲ್, ಉತ್ತರ ಕನ್ನಡ – ಅನಂತ್ ಕುಮಾರ ಹೆಗಡೆ, ಬೆಳಗಾವಿ -ಸುರೇಶ್ ಅಂಗಡಿ, ದಾವಣಗೆರೆ – ಜಿ.ಎಂ.ಸಿದ್ದೇಶ್ವರ, ಉಡುಪಿ-ಚಿಕ್ಕಮಗಳೂರು – ಡಿ.ಎನ್.ಜೀವರಾಜ್/ಜಯಪ್ರಕಾಶ್ ಹೆಗಡೆ/ಡಿ.ವಿ.ಸದಾನಂದ ಗೌಡ, ಬೀದರ್ -ಭಗವಂತ ಖೂಬಾ, ರಾಯಚೂರು –, ಕೆ.ಶಿವನಗೌಡ ನಾಯಕ್/ತಿಪ್ಪರಾಜು ಹವಾಲ್ದಾರ್, ಕಲಬುರಗಿ (ಎಸ್‌ಸಿ ಮೀಸಲು) -ಬಾಬೂರಾವ್ ಚಿಂಚನಸೂರು/ಕೆ.ರತ್ನಪ್ರಭಾ, ಬಳ್ಳಾರಿ (ಎಸ್‌ಟಿ ಮೀಸಲು) – ಜೆ. ಶಾಂತ, ಕೊಪ್ಪಳ – ಸಂಗಣ್ಣ ಕರಡಿ, ಚಿತ್ರದುರ್ಗ (ಎಸ್‌ಟಿ ಮೀಸಲು) – ಜನಾರ್ದನ ಸ್ವಾಮಿ/ಮಾದರ ಚೆನ್ನಯ್ಯ ಶ್ರೀಗಳು, ತುಮಕೂರು – ಸುರೇಶ್ ಗೌಡ/ಸೊಗಡು ಶಿವಣ್ಣ, ಬೆಂಗಳೂರು ದಕ್ಷಿಣ – ಅನಂತ್ ಕುಮಾರ್/ತೇಜಸ್ವಿ ಸೂರ್ಯ, ಬೆಂಗಳೂರು ಉತ್ತರ – ಡಿ.ವಿ.ಸದಾನಂದ ಗೌಡ/ಮುನಿರಾಜು, ಮೈಸೂರು-ಕೊಡಗು – ಪ್ರತಾಪ್ ಸಿಂಹ/ಯದುವೀರ್ ಒಡೆಯರ್, ಚಾಮರಾಜನಗರ (ಎಸ್‌ಸಿ ಮೀಸಲು), ಬಾಗಲಕೋಟೆ- ಪಿ.ಸಿ.ಗದ್ದಿಗೌಡರ್, ವಿಜಯಪುರ (ಎಸ್‌ಸಿ ಮೀಸಲು) – ರಮೇಶ್ ಜಿಗಜಿಣಗಿ, ಹಾವೇರಿ-ಗದಗ – ಶಿವಕುಮಾರ್ ಉದಾಸಿ, ಹುಬ್ಬಳ್ಳಿ-ಧಾರವಾಡ – ಪ್ರಹ್ಲಾದ್ ಜೋಶಿ, ಕೋಲಾರ (ಎಸ್‌ಸಿ ಮೀಸಲು) – ಡಿ.ಎಸ್.ವೀರಯ್ಯ, ಚಿಕ್ಕಬಳ್ಳಾಪುರ – ಬಿ.ಎನ್.ಬಚ್ಚೇಗೌಡ, ಶಿವಮೊಗ್ಗ – ಬಿ.ವೈ.ರಾಘವೇಂದ್ರ, ಚಿಕ್ಕೋಡಿ-ಸದಲಗಾ – ರಮೇಶ್ ಕತ್ತಿ
Click this button or press Ctrl+G to toggle between Kannada and English