ಬೆಂಗಳೂರು: ಕಳೆದ ಎರಡು ದಿನಗಳಿಂದ ಧಾರಾಕಾರವಾಗಿ ಸುರಿದ ಮಳೆಯಿಂದ ನಗರದಲ್ಲಿ ಪ್ರವಾಹದಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಮಳೆ ಸೃಷ್ಟಿಸಿರುವ ಅವಾಂತರದಿಂದ ಜನರು ಪಾರಾಗುವ ಮೊದಲೇ ಮತ್ತೆ ಬುಧವಾರ ಮಳೆ ಸುರಿದಿದೆ.
ಸಂಜೆ ಕೃಷ್ಣರಾಜಪುರಂ 66 ಮಿ.ಮೀ, ಮಹಾದೇವಪುರ 62 ಮಿ.ಮೀ, ಬೊಮ್ಮನಹಳ್ಳಿ 54 ಮಿ.ಮೀ, ಹೆಚ್ಎಸ್ಆರ್ ಲೇಔಟ್ 52 ಮಿ.ಮೀ, ದೊಮ್ಮಲೂರು ಮತ್ತು ಕೊಣೆನ ಅಗ್ರಹಾರದಲ್ಲಿ ತಲಾ 86 ಮಿ.ಮೀ ಮಳೆ ದಾಖಲಾಗಿದೆ.
ಸೋಮವಾರ ಮತ್ತು ಮಂಗಳವಾರದ ಎರಡೂ ದಿನಗಳು ಒಟ್ಟು 22 ಮಿ.ಮೀ. ಮಳೆಯಾಗಿದ್ದು, ಮೈಸೂರು ರಸ್ತೆ, ಜೆಪಿ ನಗರ, ನಗರದ ಬನ್ನೇರುಘಟ್ಟ ರಸ್ತೆ, ಕೃಷ್ಣ ಚಂದ್ರಾ ಲೇ ಔಟ್, ಜಯನಗರ, ಬಿಟಿಎಂ ಲೇ ಔಟ್, ಗಿರಿನಗರ, ಹೆಬ್ಬಾಳದ ಸುತ್ತಮುತ್ತಲು ಪ್ರವಾಹದಂತಹ ಪರಿಸ್ಥಿತಿ ಎದುರಾಗಿತ್ತು.
ಬುಧವಾರವೂ ಮುಂದುವರಿದ ಮಳೆಯಿಂದ ನಗರದ ಪ್ರಮುಖ ರಸ್ತೆಗಳ ಮೇಲೆ ನೀರು ನಿಂತು ದ್ವಿಚಕ್ರ ವಾಹನ ಸವಾರರು ಸಂಚಾರ ದಟ್ಟಣೆಯಿಂದಾಗಿ ಪರಿತಪಿಸುವಂತಾಗಿದೆ.
Click this button or press Ctrl+G to toggle between Kannada and English