17ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಮುಖ್ಯಮಂತ್ರಿಗಳಿಂದ ಅದ್ದೂರಿ ಚಾಲನೆ

5:15 PM, Friday, January 13th, 2012
Share
1 Star2 Stars3 Stars4 Stars5 Stars
(4 rating, 1 votes)
Loading...

National Youth Festival

ಮಂಗಳೂರು : 17ನೇ ರಾಷ್ಟ್ರೀಯ ಯುವಜನೋತ್ಸವವನ್ನು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಮಂಗಳಾ ಕ್ರೀಡಾಂಗಣದಲ್ಲಿ ಗುರುವಾರ ಸಂಜೆ ಉದ್ಘಾಟಿಸಿದರು.

ಕೇಂದ್ರ ಸರಕಾರ, ರಾಜ್ಯ ಸರಕಾರ ಹಾಗೂ ನೆಹರೂ ಯುವ ಕೇಂದ್ರ ಜಂಟಿಯಾಗಿ ಸ್ವಾಮಿ ವಿವೇಕಾನಂದರ ಹುಟುಹಬ್ಬದ ಸವಿನೆನಪಿಗಾಗಿ ರಾಷ್ಟ್ರೀಯ ಯುವಜನೋತ್ಸವವನ್ನು ಅದ್ದೂರಿಯಾಗಿ ಆಯೋಜಿಸಿದೆ.

ನೆಹರೂ ಮೈದಾನದಲ್ಲಿ ಗುರುವಾರ ಮಧ್ಯಾಹ್ನ ಮೂರು ಗಂಟೆಗೆ ಐದು ದಿನಗಳ ಕಾಲ ನಡೆಯುವ 17ನೇ ರಾಷ್ಟ್ರೀಯ ಯುವಜನೋತ್ಸವದ ಅದ್ದೂರಿ ಮೆರವಣಿಗೆಯನ್ನು ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೆಮಾರ್‌ ಅವರು ಬಣ್ಣದ ಧ್ವಜ ಬೀಸುವ ಮೂಲಕ ಚಾಲನೆ ನೀಡಿದರು.

National Youth Festival

ದೇಶದ ವಿವಿಧ ರಾಜ್ಯದ ಪ್ರತಿನಿಧಿಗಳು, ಕಲಾ ತಂಡಗಳು ಮೆರವಣಿಗೆ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಹಾದು ಮಂಗಳಾ ಕ್ರೀಡಾಂಗಣ ಕಡೆಗೆ ಸಾಗಿತು. ಈ ಬೃಹತ್‌ ಮೆರವಣಿಗೆಯನ್ನು ರಸ್ತೆಯ ಇಕ್ಕೆಲಗಳಲ್ಲಿ ಜನರು ಕುತೂಹಲದಿಂದ ವೀಕ್ಷಿಸಿದರು.

ಮೆರವಣಿಗೆಯಲ್ಲಿ ಅಂಡಮಾನ್‌ ಮತ್ತು ನಿಕೋಬಾರ್‌, ಆಂಧ್ರಪ್ರದೇಶ, ಅಸ್ಸಾಂ, ಅರುಣಾಚಲ ಪ್ರದೇಶ, ಬಿಹಾರ, ಚಂಡೀಗಢ, ಚತ್ತೀಸ್‌ಗಢ, ಜಮ್ಮುಕಾಶ್ಮೀರ, ಅಸ್ಸಾಂ, ಮಧ್ಯಪ್ರದೇಶ, ದಮನ್‌ ದಿಯು, ದಿಲ್ಲಿ, ಗೋವಾ, ಗುಜರಾತ್‌, ಹರಿಯಾಣ, ಹಿಮಾಚಲ ಪ್ರದೇಶ,ಸ ಜಾರ್ಖಂಡ್‌, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ಒರಿಸ್ಸಾ, ಪೋಂಡಿಚೇರಿ, ಪಂಜಾಬ್‌, ಉತ್ತರಾಂಚಲ, ರಾಜಸ್ತಾನ್‌, ಸಿಕ್ಕಿಂ, ತಮಿಳುನಾಡು, ಪಶ್ಚಿಮ ಬಂಗಾಳ ಪ್ರದೇಶಗಳ ಪ್ರತಿನಿಧಿಗಳು ಭಾಗವಹಿಸಿದರು.

National Youth Festival

ದೇಶದ ವಿವಿಧ ರಾಜ್ಯಗಳಿಂದ ಬಂದ ಮಹಿಳಾ ಡೊಳ್ಳು ಕುಣಿತ, ಗೊಂಬೆಗಳು, ಪೂಜಾ ಕುಣಿತ, ಕಂಗೀಲು ಕುಣಿತ ಗೊರವರ ಕುಣಿತ, ನಂದೀ ಧ್ವಜ, ತಾಲೀಮ್‌, ಕೊಡೆ, ತುಳುನಾಡ ತಾಸೆ, ತಾಸೆ, ವೀರಗಾಸೆ, ಹಾಲಕ್ಕಿ ಕುಣಿತ, ಪುರವಂತಿಕೆ, ದಪ್ಪು, ಡೊಳ್ಳು ಕುಣಿತ, ಪಟದ ಕುಣಿತ,ಶರ್ದೂಲ, ದುಡಿ ಕುಣಿತ, ಮಹಿಳಾ ಚೆಂಡೆ, ಮರಗಾಲು ಕುಣಿತ, ಚೆಂಡೆ, ಪೂಜಾ ಕುಣಿತ, ಸಾಕ್ಸ್‌ಫೋನ್‌, ಬೆಳಗಾವಿ ಪೇಟ, ಕೀಲು ಕುದುರೆ, ಯಕ್ಷಗಾನ (ತೆಂಕುತಿಟ್ಟು ಮತ್ತು ಬಡಗುತಿಟ್ಟು), ವೀರಭದ್ರ ಕುಣಿತಆಟಿ ಕಳಂಜ, ಕಂಸಾಳೆ, ಚಿತ್ರದುರ್ಗ ಬ್ಯಾಂಡ್‌ಸೆಟ್‌, ಗಿಡ್ಡ ಮನುಷ್ಯರು, ಕರಗ ನೃತ್ಯ, ಗೊಂಬೆ ಬಳಗ, ಶಂಖ, ಕೊಂಬು, ಚೆಂಡೆ, ಬ್ಯಾಂಡ್‌ಸೆಟ್‌, ತ್ರಿವರ್ಣ ಧ್ವಜ, ಪೊಲೀಸ್‌ ಬ್ಯಾಂಡ್‌, ಜೊತೆಗೆ ಕೇರಳದ ಮಹಿಳಾ ಚಂಡೆ, ಪಂಚವಾದ್ಯ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದವು. ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸಮವಸ್ತ್ರಗಳಲ್ಲಿ ಭಾಗವಹಿಸಿದ್ದರು.

ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಶಾಸಕ ಯು. ಟಿ. ಖಾದರ್‌, ಕಸಾಪ ಜಿಲ್ಲಾ ಅಧ್ಯಕ್ಷ ಎಸ್‌. ಪ್ರದೀಪ್‌ ಕುಮಾರ್‌ ಕಲ್ಕೂರ ಸೇರಿದಂತೆ ಜನಪ್ರತಿನಿಧಿಗಳು, ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

ಯುವಜನೋತ್ಸವವನ್ನು ಉದ್ಘಾಟಿಸಿದ ಮುಖ್ಯಮಂತ್ರಿಗಳು ರಾಷ್ಟ್ರೀಯ ಯುವಜನೋತ್ಸವವು ಮಂಗಳೂರಿನ ನಡೆಯುತ್ತಿರುವುದು ಹೆಮ್ಮೆಯ ವಿಚಾರ ಇದು ಸರ್ವರಿಗೂ ಸಂತಸದ ಸಂಗತಿ. ದೇಶದ 4,500ಕ್ಕೂ ಹೆಚ್ಚಿನ ಪ್ರತಿನಿಧಿಗಳಿಗೆ ಕರ್ನಾಟಕದ 6 ಕೋಟಿ ಜನತೆಯ ಪರವಾಗಿ ತಾನು ಶುಭ ಹಾರೈಸುವುದಾಗಿ ಅವರು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಈ ನಿಟ್ಟಿನಲ್ಲಿ ಶ್ರಮಿಸಿದ ಸರ್ವರಿಗೂ ತನ್ನ ಅಭಿನಂದನೆ ಸಲ್ಲಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English