ಬೆಂಗಳೂರು: ಜಿಮ್ ಟ್ರೈನರ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದುನಿಯಾ ವಿಜಯ್ ಅಂಡ್ ಟೀಂ ಸೆಷನ್ಸ್ ಕೋರ್ಟ್ ಮೊರೆ ಹೋಗಿದೆ.
ದುನಿಯಾ ವಿಜಿ ಪರ ವಕೀಲ ಶಿವಕುಮಾರು ಇವತ್ತು ಸೆಷನ್ಸ್ ಕೊರ್ಟ್ಗೆ ನಾಲ್ವರ ಪರ ಅರ್ಜಿ ಸಲ್ಲಿಸಿದ್ದಾರೆ. ನಿನ್ನೆ ಎಸಿಎಂಎಂ ಕೋರ್ಟ್ನಲ್ಲಿ ಜಾಮೀನು ಅರ್ಜಿ ವಜಾ ಹಿನ್ನೆಲೆ ಇವತ್ತು ಸೆಷನ್ಸ್ ಕೋರ್ಟ್ ಮೊರೆ ಹೋಗಿ ದುನಿಯಾ ವಿಜಿ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ.
ದುನಿಯಾ ವಿಜಯ್, ಪ್ರಸಾದ್, ಮಣಿ ಪರವಾಗಿ ಅರ್ಜಿ ಸಲ್ಲಿಕೆಯಾಗಿದೆ. ಸೆಷನ್ಸ್ ಕೋರ್ಟ್ನಲ್ಲಿ ಜಾಮೀನು ಸಿಗುತ್ತೆ ಅನ್ನೋ ಭರವಸೆಯಲ್ಲಿ ದುನಿಯಾ ವಿಜಿ ಟೀಂ ಇದ್ದಾರೆ. ಒಂದು ವೇಳೆ ಇಲ್ಲಿನೂ ಜಾಮೀನು ಸಿಗದೇ ಇದ್ದರೆ ದುನಿಯಾ ವಿಜಿ ಅಂಡ್ ಟೀಂಗೆ ಮತ್ತೆ ಪರಪ್ಪನ ಅಗ್ರಹಾರದ ವಾಸವೇ ಮುಂದುವರೆಯಲಿದೆ.
Click this button or press Ctrl+G to toggle between Kannada and English