ಔಷಧ ಅಂಗಡಿ ಮುಷ್ಕರಕ್ಕೆ ಬೆಂಗಳೂರಲ್ಲಿ ಮಿಶ್ರ ಪ್ರತಿಕ್ರಿಯೆ

1:51 PM, Friday, September 28th, 2018
Share
1 Star2 Stars3 Stars4 Stars5 Stars
(No Ratings Yet)
Loading...

medical-shopಬೆಂಗಳೂರು: ದೇಶಾದ್ಯಂತ ಕರೆ ನೀಡಲಾಗಿರುವ ಔಷಧ ಅಂಗಡಿಗಳ ಮುಷ್ಕರಕ್ಕೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲ ಔಷಧ ಅಂಗಡಿಗಳು ಮುಚ್ಚುವ ಮೂಲಕ ಪ್ರತಿಭಟನೆಗೆ ಬೆಂಬಲ ನೀಡಿದರೆ, ಮತ್ತೆ ಕೆಲ ಔಷಧ ಅಂಗಡಿಗಳು ಎಂದಿನಂತೆ ವ್ಯಾಪಾರ ವಹಿವಾಟು ನಡೆಸಿ ರೋಗಿಗಳಿಗೆ ನೆರವಾಗಿವೆ.

ಮುಷ್ಕರದಿಂದ ಕೆಲವೆಡೆ ಬಿಸಿ ತಟ್ಟಿದೆ. ಸಣ್ಣಪುಟ್ಟ ಕ್ಲಿನಿಕ್ಗಳ ಪಕ್ಕದಲ್ಲಿರುವ ಔಷಧ ಅಂಗಡಿಗಳು ಕೆಲವೆಡೆ ತೆರೆಯದೇ ಮುಷ್ಕರಕ್ಕೆ ಬೆಂಬಲ ನೀಡಿದ್ದು ರೋಗಿಗಳು ಔಷಧಕ್ಕೆ ಪರದಾಡಬೇಕಾಯಿತು. ಆದರೆ ಸಮೀಪದಲ್ಲೇ ಇರುವ ಇತರ ಕೆಲ ಮೆಡಿಕಲ್ ಶಾಪ್ಗಳು ಎಂದಿನಂತೆ ತೆರೆದಿದ್ದು, ರೋಗಿಗಳ ಪರದಾಟಕ್ಕೆ ಕೊಂಚ ಬ್ರೇಕ್ ಹಾಕಿದವು.

ಇನ್ನು ಗಿರಿನಗರ, ಶ್ರೀನಗರ, ಹನಮಂತನಗರ ಸುತ್ತಮುತ್ತ ಆಸ್ಪತ್ರೆಗಳಲ್ಲಿನ ಮೆಡಿಕಲ್‌ ಶಾಪ್ಗಳು ತೆರೆದಿವೆ. ಮುಖ್ಯ ರಸ್ತೆಯಲ್ಲಿನ ಕೆಲ ಮೆಡಿಕಲ್ ಶಾಪ್ಗಳು ಮಾತ್ರ ಮುಚ್ಚಿದ್ದು, ಬಹುತೇಕ ಔಷಧ ಅಂಗಡಿಗಳು ಎಂದಿನಂತೆ ತೆರೆದಿವೆ. ಇದರಿಂದಾಗಿ ರೋಗಿಗಳು ಪರದಾಟವಿಲ್ಲದೇ ಔಷಧಿ ಖರೀದಿ ಮಾಡಿದರು.

ಸಣ್ಣಪುಟ್ಟ ಆರೋಗ್ಯ ಸಮಸ್ಯೆಗೆ ಆಸ್ಪತ್ರೆಗೆ ಹೋಗುವ ಬದಲು ಮೆಡಿಕಲ್‌ ಶಾಪ್ಗಳನ್ನೇ ಬಹುತೇಕ ಜನ ಅವಲಂಭಿಸಿದ್ದು, ಅವರೆಲ್ಲಾ ಮುಂಜಾಗ್ರತಾ ಕ್ರಮವಾಗಿ ಜ್ವರ, ನೆಗಡಿ, ಮೈ-ಕೈ ನೋವು, ತಲೆನೋವು, ಗ್ಯಾಸ್ಟ್ರಿಕ್ನಂತಹ ಕಾಯಿಲೆಗಳಿಗೆ ಮೊದಲೇ ಔಷಧ ಖರೀದಿಸಿದ್ದರಂದಿ ಇಂದಿನ ಮುಷ್ಕರಿಂದ ರೋಗಿಗಳಿಗೆ ಅಂತಹ ತೊಂದರೆ ಕಂಡುಬರಲಿಲ್ಲ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English