ಲಂಚ ಪಡೆಯುತ್ತಿದ್ದ ಕರ್ನಾಟಕ ಗೃಹ ಮಂಡಳಿ ಇಬ್ಬರು ಅಧಿಕಾರಿಗಳು ಎಸಿಬಿ ಪೊಲೀಸರ ಬಲೆ..!

10:34 AM, Saturday, September 29th, 2018
Share
1 Star2 Stars3 Stars4 Stars5 Stars
(No Ratings Yet)
Loading...

offecerಮಂಗಳೂರು: ಸಾಲ ಮರುಪಾವತಿಸಿದ ಬಳಿಕ ಮೂಲ ದಾಖಲೆಗಳನ್ನು ಹಿಂತಿರುಗಿಸಲು ಲಂಚ ಪಡೆಯುತ್ತಿದ್ದ ಕರ್ನಾಟಕ ಗೃಹ ಮಂಡಳಿ ನಿಗಮದ ಇಬ್ಬರು ಅಧಿಕಾರಿಗಳು ಎಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಲಂಚ ಸ್ವೀಕರಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಗೃಹ ಮಂಡಳಿ ನಿಗಮದ ಸಹಾಯಕ ಕಂದಾಯ ಅಧಿಕಾರಿ ಶ್ರೀನಿವಾಸ ಶೆಟ್ಟಿ ಎಂಬವವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ. ಇನ್ನೋರ್ವ ತಪ್ಪಿತಸ್ಥ ಅಧಿಕಾರಿ ಕರ್ನಾಟಕ ಗೃಹ ಮಂಡಳಿಯ ಕಾರ್ಯಪಾಲಕ ಅಭಿಯಂತರ ವಿಜಯ ಕುಮಾರ್ ಎಂಬವವರು ಪರಾರಿಯಾಗಿದ್ದಾರೆ.

ಮಂಗಳೂರಿನ ಬಜ್ಪೆ ಅದ್ಯಪಾಡಿ ನಿವಾಸಿ ಗಂಗಾಧರ ಕೆ. ಎಂಬುವರ ಪೂರ್ವಿಕರು ಕರ್ನಾಟಕ ಗೃಹ ಮಂಡಳಿಯಲ್ಲಿ ಸಾಲ ಪಡೆದಿದ್ದರು. ಸಾಲ ಮರುಪಾವತಿಯಾದ ಬಳಿಕ ನೀಡಿದ ಮೂಲ ದಾಖಲೆಗಳನ್ನು ಹಿಂದಿರಿಗಿಸಲು ಮತ್ತು ನಿರಕ್ಷೇಪಣಾ ಪತ್ರವನ್ನು ನೀಡುವಂತೆ ಗಂಗಾಧರ ಕೆ. ಎಂಬವರು ಕರ್ನಾಟಕ ಗೃಹ ಮಂಡಳಿ ನಿಗಮಕ್ಕೆ ಮನವಿ ಮಾಡಿಕೊಂಡಿದ್ದರು.

ಈ ಸಂದರ್ಭ ಮಂಗಳೂರು ಕರ್ನಾಟಕ ಗೃಹ ಮಂಡಳಿ ನಿಗಮದ ಕಾರ್ಯಪಾಲಕ ಅಭಿಯಂತರ ವಿಜಯ ಕುಮಾರ್ ಮತ್ತು ಸಹಾಯಕ ಕಂದಾಯ ಅಧಿಕಾರಿ ಶ್ರೀನಿವಾಸ್ ಶೆಟ್ಟಿ ಎಂಬ ಇಬ್ಬರು ಅಧಿಕಾರಿಗಳು 20,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ನಡುವೆ ಮಾತುಕತೆ ನಡೆಸಿ ಅಧಿಕಾರಿಗಳಿಬ್ಬರು 12,000 ಕ್ಕೆ ಒಪ್ಪಿಕೊಂಡು ಸ್ಥಳದಲ್ಲೇ 2 ಸಾವಿರ ಹಣ ಪಡೆದಿದ್ದು ಬಾಕಿ ಉಳಿದ 10 ಸಾವಿರ ಹಣವನ್ನು ನಾಳೆ ನೀಡುವುದಾಗಿ ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಗಂಗಾಧರ್ ಅವರು ಭ್ರಷ್ಟಾಚಾರ ನಿಗ್ರಹ ದಳ ಕಚೇರಿಗೆ ಹೋಗಿ ದೂರು ನೀಡಿದ್ದರು. ಅದರಂತೆ ನಿನ್ನೆ ಸಂಜೆ ಗಂಗಾಧರ್ ಅವರು ಮಂಗಳೂರಿನ ಕಾವೂರಿನಲ್ಲಿರುವ ಕರ್ನಾಟಕ ಗೃಹ ಮಂಡಳಿ ನಿಗಮದ ಕಚೇರಿಗೆ ಲಂಚದ ಹಣ ಹಿಡಿದುಕೊಂಡು ಹೋದಾಗ ಕರ್ನಾಟಕ ಗೃಹ ಮಂಡಳಿಯ ಸಹಾಯಕ ಕಂದಾಯ ಅಧಿಕಾರಿ ಶ್ರೀನಿವಾಸ ಶೆಟ್ಟಿ ಇದ್ದು ಅವರು ಲಂಚದ ಹಣ ಪಡೆಯುತ್ತಿದ್ದಾಗ ಪಂಚರೊಂದಿಗೆ ದಕ್ಷಿಣ ಕನ್ನಡ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ದಾಳಿಯ ಬಗ್ಗೆ ಮಾಹಿತಿ ಪಡೆದ ಕಾರ್ಯಪಾಲಕ ಅಭಿಯಂತರ ವಿಜಯ ಕುಮಾರ್ ಪರಾರಿಯಾಗಿದ್ದಾರೆ .

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English