ಕನಿಷ್ಟ ಮೂಲಭೂತ ಸೌಕರ್ಯಗಳ ಒದಗಿಸುವಲ್ಲಿ ಯು.ಟಿ ಖಾದರ್ ಸಂಪೂರ್ಣ ವಿಫಲ: ಸಂತೋಷ್ ಬಜಾಲ್

3:42 PM, Monday, October 1st, 2018
Share
1 Star2 Stars3 Stars4 Stars5 Stars
(No Ratings Yet)
Loading...

santhoshಮಂಗಳೂರು: ಜನರಿಗೆ ಒಂದು ಪ್ರದೇಶದಿಂದ ಇನ್ನೊಂದೆಡೆಗೆ ಓಡಾಟ ನಡೆಸಲು ಸಾರಿಗೆ ವ್ಯವಸ್ಥೆ ಕಲ್ಪಿಸೋದು ಸರಕಾರದ ಆದ್ಯ ಕರ್ತವ್ಯ.ಆದರೆ ಹರೇಕಳ ಗ್ರಾಮಕ್ಕೆ ಕಳೆದ ಕಲವು ವರುಷಗಳಿಂದ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದೆ ಜನ ಬೀದಿಗಿಳಿದು ಹೋರಾಟ ನಡೆಸಿದರೂ ಮನವಿಗೆ ಸ್ಪಂಧಿಸದ ಸ್ಥಳೀಯ ಶಾಸಕ ಯು.ಟಿ ಖಾದರ್ ಕನಿಷ್ಟ ಮೂಲಭೂತ ಸೌಕರ್ಯಗಳನ್ನು ಒದಗಿಸೋದರಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಇಂದು ಹರೇಕಳದಲ್ಲಿ ಸಮರ್ಮಕ ಬಸ್ ವ್ಯವಸ್ಥೆ ಹಾಗೂ ಸರಕಾರಿ ಬಸ್ಸಿಗೆ ಒತ್ತಾಯಿಸಿ ನಡೆದ ರಸ್ತೆ ತಡೆ, ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಕಳೆದ 10 ವರುಷದ ಹಿಂದೆ ಹರೇಕಳ ಗ್ರಾಮದಿಂದ ನಗರದ ಇತರೆ ಭಾಗಗಳಿಗೆ 10 ಬಸ್ಸುಗಳು ಓಡಾಟ ನಡೆಸುತ್ತಿದ್ದವು ಆದರೆ ಈಗ ಓಡುತ್ತಿರುವುದು ಕೆಲವೇ ಕೆಲವು ಬಸ್ಸುಗಳು ಮಾತ್ರ ಅದು ಕೂಡ ಆರ್ ಟಿ.ಒ ನಿಗದಿ ಪಡಿಸಿದ ಸಮಯಕ್ಕೆ ಸರಿಯಾಗಿ ಓಡುತ್ತಿಲ್ಲ, ಅನಗತ್ಯ ಟ್ರಿಪ್ ಕಡಿತ, ಹಳೆಯ ಗುಜರಿ ಬಸ್ಸ್ ಮಳೆಗಾಲದಲ್ಲಿ ಸೋರುವಂತಹ ಬಾಳ್ವಿಕೆ ಸಮಯ ಕಳೆದುಹೋದ ಬಸ್ಸಿನಿಂದಾಗಿ ಜನ ಸಮಸ್ಯೆಯನ್ನು ಎದುರಿಸುವಂತಾಗಿದೆ. ಖಾಸಗೀ ಬಸ್ಸುಗಳ ಅವ್ಯವಸ್ಥೆಯಿಂದ ಬೇಸೆತ್ತ ಜನ ಸರಕಾರಿ ಬಸ್ಸ್ ಸೇವೆ ಆರಂಭಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ,ಶಾಸಕರಿಗೆ ಮನವಿ ಸಲ್ಲಿಸಿದರೂ ಹಾಗೂ ಪ್ರತಿಭಟನೆ ನಡೆಸಿದರು ಸಮಸ್ಯೆಗಳು ಬಗೆಹರಿದಿಲ್ಲ. ಶಾಸಕ ಯು.ಟಿ ಖಾದರ್ ಚುನಾಚಣೆ ವೇಳೆ ನೀಡಿದ ಭರವಸೆಯನ್ನು ನಂಬಿ ಜನ ಓಟು ನೀಡಿದ್ದಾರೆ,

santhosh-2ಚುನಾವಣೆ ಕೆಲಸದಲ್ಲಿ ರಾತ್ರಿ ಹಗಲೆನ್ನದೆ ದುಡಿದಿದ್ದಾರೆ ,ಜಯಗಳಿಸಿದ ವೇಳೆ ಜೈಕಾರ ಕೂಗಿದ್ದಾರೆ. ಹೆಚ್ಚಾಗಿ ಬಡವರೇ ಇರುವ ಇಂತಹ ಈ ಊರಿನ ಜನರ ಸಮಸ್ಯೆಯನ್ನು ಬಗೆಹರಿಸಲು ತಾವು ತಪ್ಪಿದ್ದಲ್ಲಿ ಜೈಕಾರ ಕೂಗಿದ ಬಾಯಿಂದ ಧಿಕ್ಕಾರ ಕೂಗಲು ಗೊತ್ತಿದೆ ಎಂಬುದನ್ನು ಮರೆಯಬೇಡಿ ಎಂದು ಎಚ್ಚರಿಸಿದರು. ಆದ್ದರಿಂದ ಕೂಡಲೇ ಈ ಭಾಗದ ಬಸ್ಸಿನ ಸಮಸ್ಯೆಯನ್ನು ಬಗೆಹರಿಸಬೇಕೆಂದು ಈ ವೇಳೆ ಒತ್ತಾಯಿಸಿದರು.ತಪ್ಪಿದಲ್ಲಿ ಮುಂದಿನ ದಿನ ಸಮಸ್ಯೆ ಈಡೇರುವವರೆಗೆ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ಈ ವೇಳೆ ಡಿವೈಎಫ್ಐ ಜಿಲ್ಲಾ ಪದಾಧಿಕಾರಿ ರಫೀಕ್ ಹರೇಕಳ, ಸ್ಥಳೀಯ ಡಿವೈಎಫ್ಐ ಮುಖಂಡರು, ಪಂಚಾಯತ್ ಸದಸ್ಯರಾದ ಅಶ್ರಫ್ ಹರೇಕಳ, ಹನೀಫ್ ಹರೇಕಳ , ಇಸ್ಮಾಯಿಲ್ ಉಪಸ್ಥಿತರಿದ್ದರು. ಪ್ರತಿಭಟನೆಯ ನೇತೃತ್ವವನ್ನು ಹರೇಕಳ ಘಟಕದ ಅದ್ಯಕ್ಷರಾದ ನಿಝಾಮ್, ಕಾರ್ಯದರ್ಶಿ ಸಾಧಿಕ್, ಶಾಕಿರ್, ಹಮೀದ್, ಸತ್ತಾರ್, ಪುತ್ತ, ಇಕ್ಬಾಲ್ ಮುಂತಾದವರು ವಹಿಸಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English