ಬೆಂಗಳೂರು: ಮಹಾತ್ಮ ಗಾಂಧಿ ಜಯಂತಿಯ ದಿನವಾದ ಇಂದು ನಗರದ ಸ್ವಚ್ಛ ಭಾರತ ಅಭಿಯಾನದಲ್ಲಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಸೇರಿದಂತೆ ಗಣ್ಯರು ಪೊರಕೆ ಹಿಡಿದು ಕಸ ಗುಡಿಸಿದರು.
ಮಹಾತ್ಮ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರಿಂದ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮ ನಡೆಸಲಾಯಿತು. ಕಮಲ ನಗರದಲ್ಲಿ ರಸ್ತೆಯಲ್ಲಿ ಕಸ ಗುಡಿಸಿ ಸ್ವಚ್ಛತಾ ಆಂದೋಲನ ಮಾಡಿದರು. ಮಾಜಿ ಶಾಸಕ ನೆಲ ನರೇಂದ್ರ ಬಾಬು ಸೇರಿದಂತೆ ಗಣ್ಯರು ಸಾಥ್ ನೀಡಿದರು.
ನಂತರ ಗಣ್ಯರು ಮಾತ್ರ ಮಾಸ್ಕ್ ಮತ್ತೆ ಗ್ಲೋಸ್ ಹಾಕಿದ್ದೀರಾ, ಪ್ರತಿನಿತ್ಯ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಇದೆಲ್ಲ ಯಾಕಿಲ್ಲ ಅಂತಾ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿವಿಎಸ್, ನಾನು ಮುಖ್ಯಮಂತ್ರಿಯಾದಾಗ ಮಾಡಿದ ಮೊದಲ ಕೆಲಸವೇ ಪೌರ ಕಾರ್ಮಿಕರದ್ದು. ಸುಮಾರು 7 ಸಾವಿರ ನೌಕರರನ್ನು ಖಾಯಂ ಮಾಡಿದ್ದೆ ಎಂದ ಅವರು, ಪೌರ ಕಾರ್ಮಿಕರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಿದ್ದಾರೆ. ಇವರಿಗೆ ಅದನ್ನು ಬಳಸೋಕೆ ಬರಲ್ಲ. ಅವರಿಗೆ ಅರಿವು ಮೂಡಿಸೋ ಕೆಲಸವಾಗಬೇಕು. ಸಣ್ಣ ಸಣ್ಣ ವಿಚಾರವನ್ನು ಮಾಧ್ಯಮದವರು ದೊಡ್ಡದು ಮಾಡುತ್ತೀರಾ ಎಂದರು.
Click this button or press Ctrl+G to toggle between Kannada and English