ಕುಂದಾಪುರ: ಒಂದೇ ವರ್ಷದಲ್ಲಿ ಸತತ ಮೂರನೇ ಬಾರಿಗೆ ಕೊಲ್ಲುರು ಶ್ರೀ ಮೂಕಾಂಬಿಕೆ ದರ್ಶನ ಪಡೆಯುವ ಮೂಲಕ ಸಚಿವ ಡಿ.ಕೆ. ಶಿವಕುಮಾರ್ ಕೊಲ್ಲೂರು ಕ್ಷೇತ್ರದ ಬಗ್ಗೆ ತನಗಿರುವ ನಂಬಿಕೆ ಹಾಗೂ ಭಕ್ತಿ ಪ್ರದರ್ಶಿಸಿದ್ದಾರೆ.
ಇಂದು (ಮಂಗಳವಾರ) ಮಧ್ಯಾಹ್ನದ ಸುಮಾರಿಗೆ ಪತ್ನಿ ಉಷಾ, ಪುತ್ರಿ ಐಶ್ವರ್ಯ ಜೊತೆ ಕೊಲ್ಲೂರಿಗೆ ಆಗಮಿಸಿದ ಅವರು ದೇವಿ ದರ್ಶನ ಪಡೆದು ವಿಶೇಶ ಪೂಜೆ ಸಲ್ಲಿಸಿದರು. ದೇವಳಕ್ಕೆ ಹೊರತುಪಡಿಸಿ ಬೇರ್‍ಯಾರಿಗೂ ಕೂಡ ಪೂರ್ವ ಮಾಹಿತಿ ನೀಡಿರಲಿಲ್ಲ. ಮಾಧ್ಯಮಕ್ಕೂ ಕೂಡ ಯಾವುದೇ ಮಾಹಿತಿ ಇರಲಿಲ್ಲ. ಸದ್ಯ ಸಚಿವ ಡಿಕೆಶಿ ಸಿಬಿಐ, ಇಡಿ ತನಿಖೆ ಎದುರಿಸುತ್ತಿದ್ದು ದೇವಾಲಯ ಭೇಟಿ ಬಹಳಷ್ಟು ಚರ್ಚೆಗೆ ಕಾರಣವಾಗಿದೆ.
2017 ಡಿಸೆಂಬರ್ 14ರಂದು ಕೊಲ್ಲೂರಿಗೆ ಆಗಮಿಸಿ ವಿಶೇಶ ಪೂಜೆ ಸಲ್ಲಿಸಿದ್ದರು. ಆ ಬಳಿಕ ಜನವರಿ ತಿಂಗಳಿನಲ್ಲಿ ಸತತ ಮೂರು ದಿನಗಳ ಕಾಲ ಶತ ಚಂಡಿಕಾ ಯಾಗ ನಡೆಸಿದ್ದರು. ಇವೆರಡು ಕೂಡ ಚುನಾವಣಾ ಪೂರ್ವ ಅಂದರೆ ಹಿಂದಿನ ಸರಕಾರದ ಅವಧಿಯಲ್ಲಿ ಸಚಿವರಾಗಿದ್ದ ವೇಳೆಯಲ್ಲಿ ನಡೆದ ಭೇಟಿಯಾಗಿತ್ತು. ಈ ಸಮ್ಮಿಶ್ರ ಸರಕಾರದಲ್ಲಿ ಮತ್ತೆ ಸಚಿವರಾದ ಡಿಕೆಶಿ ಇಮ್ದು ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದಿದ್ದಾರೆ.
Click this button or press Ctrl+G to toggle between Kannada and English