ರೂಪಾಯಿ ಮೌಲ್ಯ ಕುಸಿತ: ರೂಪಾಯಿ ಕುಸಿತಕ್ಕೆ ಷೇರು ಮಾರುಕಟ್ಟೆ ವಿಚಲಿತ

11:20 AM, Wednesday, October 3rd, 2018
Share
1 Star2 Stars3 Stars4 Stars5 Stars
(No Ratings Yet)
Loading...

rupees-rateನವದೆಹಲಿ: ಭಾರತದ ರೂಪಾಯಿ ಮೌಲ್ಯ ಮತ್ತೆ ಮುಗ್ಗರಿಸಿದ್ದು, ಈ ಬಾರಿ ಇದು ದಾಖಲೆಯ ಕುಸಿತವನ್ನು ಕಂಡಿದೆ. ದಿನದ ಆರಂಭದಲ್ಲೇ ರೂಪಾಯಿ ಕುಸಿತಕ್ಕೆ ಷೇರು ಮಾರುಕಟ್ಟೆ ಸಹ ವಿಚಲಿತವಾಗಿದೆ.

ಇದೇ ಮೊದಲ ಬಾರಿಗೆ ರೂಪಾಯಿ ಮೌಲ್ಯ 73ರ ಗಡಿ ತಲುಪಿದ್ದು ಈ ಮೂಲಕ ದಾಖಲೆಯ ಕುಸಿತವಾಗಿದೆ. ದಿನದ ಆರಂಭಕ್ಕೆ 34 ಪೈಸೆ ಇಳಿಕೆಯಾಗುವ ಮೂಲಕ ರೂಪಾಯಿ ಮೌಲ್ಯ 73.33 ರೂ.ಗೆ ಬಂದು ನಿಂತಿದೆ. ಇದರ ಜೊತೆಗೆ ಅತ್ತ ಸೆನ್ಸೆಕ್ಸ್ 200 ಅಂಕ ಇಳಿಕೆಯಾಗಿ ಆರಂಭದಲ್ಲೇ ಹೂಡಿಕೆದಾರರನ್ನು ಕಂಗಾಲು ಮಾಡಿದೆ.

ಇಟಲಿಯಲ್ಲಿನ ಬಿಕ್ಕಟ್ಟು, ಕಚ್ಚಾ ತೈಲದ ಬೆಲೆ ಏರಿಕೆ ಜಾಗತಿಕ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದ್ದು, ಇದು ಭಾರತದ ರೂಪಾಯಿಗೆ ಹೊಡೆತ ನೀಡಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English