ಮಂಗಳೂರು: ಮಂಗಳೂರು ಹೊರವಲಯದ ಸೂರಲ್ಪಾಡಿ ಬಳಿ ಸೆ.24ರಂದು ನಡೆದ ಬಜರಂಗದಳ ಕಾರ್ಯಕರ್ತ ಹರೀಶ್ ಶೆಟ್ಟಿ ಎಂಬವರ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕು ಅಮ್ಮುಂಜೆ ಗ್ರಾಮದ ಕಲಾಯಿ ಮದೀನಾ ಮಸೀದಿಯ ಬಳಿ ನಿವಾಸಿ ಮೊಹಮ್ಮದ್ ಶರೀಫ್ ಅಲಿಯಾಸ್ ಶರೀಫ್ (24), ಮಂಗಳೂರು ತಾಲೂಕು ಬಜಪೆ ಕಂದಾವರ ಗ್ರಾಮದ ಕಂದಾವರ ಪಂಚಾಯತ್ ಬಳಿ ನಿವಾಸಿ ಶಿಫಾಜ್ (21), ಬಜಪೆ ಕಂದಾವರ ಗ್ರಾಮದ ಚರ್ಚ್ ರಸ್ತೆ ನಿವಾಸಿ ಮೊಹಮ್ಮದ್ ಆರಿಫ್ (28) ಬಂಧಿತ ಆರೋಪಿಗಳು. ಬಂಧಿತರಿಂದ ಒಂದು ಎಫ್ಝೆಡ್ ಬೈಕನ್ನು ವಶಪಡಿಸಿಕೊಳ್ಳಲಾಗಿದೆ.
ಹರೀಶ್ ಶೆಟ್ಟಿಯವರು ಕೈಕಂಬದಿಂದ ತನ್ನ ಕೆಲಸ ಮುಗಿಸಿ ರಾತ್ರಿ ಮನೆಗೆ ತೆರಳುತ್ತಿದ್ದ ವೇಳೆ ಸೂರಲ್ಪಾಡಿ ಎಂಬಲ್ಲಿ ಮೋಟಾರ್ ಸೈಕಲ್ನಲ್ಲಿ ಬಂದ ಆರೋಪಿಗಳು ಮಾರಕಾಸ್ತ್ರಗಳಿಂದ ಹರೀಶ್ ಶೆಟ್ಟಿಯವರಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದರು ಎನ್ನಲಾಗಿತ್ತು.
ಈ ಕುರಿತು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪತ್ತೆಗಾಗಿ ಬಜಪೆ ಪೊಲೀಸರು, ಮಂಗಳೂರು ಸಿಸಿಬಿ ಮತ್ತು ಮಂಗಳೂರು ನಗರ ಉತ್ತರ ಉಪವಿಭಾಗ ಪಣಂಬೂರು ರೌಡಿ ನಿಗ್ರಹ ದಳದ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿತ್ತು. ಪ್ರಕರಣದ ತನಿಖೆಯ ವೇಳೆ ಇನ್ನೂ ಹೆಚ್ಚಿನ ಆರೋಪಿಗಳು ಭಾಗಿಯಾಗಿರುವುದು ಕಂಡು ಬಂದಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
Click this button or press Ctrl+G to toggle between Kannada and English