ತೊಕ್ಕೊಟ್ಟು : ಮುನ್ನೂರು ಗ್ರಾಮ ಪಂಚಾಯತ್‌ನಲ್ಲಿ ಈಗ ನಕಲಿ ದೃಢಪತ್ರ, ಲೈಸನ್ಸ್ ನೀಡುವ ಜಾಲವೊಂದು ಕಾರ್ಯಚರಿಸುತ್ತಿದ್ದು ಇದನ್ನು ಪಡೆದ ಮದನಿನಗರ ನಿವಾಸಿಯೊಬ್ಬರ ವಿರುದ್ದ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಗುರವಾರ ಎಪ್‌ಐಆರ್ ದಾಖಲಾಗಿದೆ.
ಮುನ್ನೂರು ಗ್ರಾಮ ಪಂಚಾಯತಿಗೊಳಪಟ್ಟ ನಿವಾಸಿಯೊಬ್ಬರು ತನ್ನ ಮಗಳ ಆಧಾರ್ ಕಾರ್ಡ್ ತಿದ್ದುಪಡಿಗೆ ಪಂಚಾಯತ್ ನೀಡಿದ ದೃಢಪತ್ರ ಎಂದು ಹೇಳಿಕೊಂಡು ಬಂದಿದ್ದರು. ಪಂಚಾಯತ್ ಸಿಬ್ಬಂದಿ ಅದನ್ನು ಪರಿಶೀಲಿಸಿದಾಗ ಅದು ನಕಲಿ ಎಂದು ತಿಳಿದು ಬಂದಿದೆ.
ಈ ನಕಲಿ ದೃಢಪತ್ರ 2018 ಜನವರಿ ತಿಂಗಳಲ್ಲಿ ನೀಡಲಾಗಿತ್ತು. ಆ ಸಮಯದಲ್ಲಿ ಪಿಡಿಯೋ ಆಗಿದ್ದವರು ಕೃಷ್ಣಸ್ವಾಮಿ ಎಂಬವರು. ಅವರು ಅದೇ ಪಂಚಾಯತ್ ನಲ್ಲಿ ಕಳೆದ ಜುಲೈ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ದೃಢಪತ್ರ ಅವರು ನೀಡಿದ್ದಾಗಿರಲಿಲ್ಲ, ಅವರ ಸಹಿ ಮತ್ತು ಪಂಚಾಯತ್ ಮೊಹರನ್ನು ನಕಲಿ ಮಾಡಿ ದೃಢಪತ್ರ ತಯಾರಿಸಲಾಗಿತ್ತು.
ಮದನಿನಗರದ ವಾರ್ಡ್ 5ರ ನಿವಾಸಿ ನಾಸಿರ್ ಎಂಬವರು ತನ್ನ ಮಗಳು ನಿಧಾ ಪಾತಿಮಾಳ ಆಧಾರ್ ಕಾರ್ಡ್ ತಿದ್ದುಪಡಿಗೆ ದೃಢಪತ್ರವನ್ನು ಮಧ್ಯವರ್ತಿಯೊಬ್ಬರಿಗೆ ದುಡ್ಡು ಕೊಟ್ಟು ಮಾಡಿಸಿಕೊಂಡಿದ್ದರು. ಆ ದೃಡಪತ್ರ ನಕಲಿಯೆಂದು ಸ್ವತ: ನಾಸಿರಿಗೂ ಗೊತ್ತಿರಲಿಲ್ಲವಂತೆ. ಆದರೆ ಈಗಿನ ಪಿಡಿಯೋ ರವೀಂದ್ರ ಅವರು ಅದನ್ನು ಗಮನಿಸಿದಾಗ ಅದು ನಕಲಿ ಎಂದು ಸಾಬೀತಾಗಿದೆ.
ಅಷ್ಟಕ್ಕೂ ದೃಡಪತ್ರವನ್ನು ಪಿಡಿಯೋ ಕೊಡುವ ಹಾಗಿಲ್ಲ. ಪಂಚಾಯತ್ ಅಧ್ಯಕ್ಷರು ಫಲಾನುಭವಿಗಳ ವಾಸ್ತವ್ಯವನ್ನು ದೃಡೀಕರಿಸಿ ಕೊಡಬೇಕಾಗುತ್ತದೆ. ಇಲ್ಲಿ ಪಿಡಿಯೋ ಸಹಿ ಬಳಸಿ ದೃಢಪತ್ರ ಪಡೆದಿರುವುದು ಸಂಪೂರ್ಣ ನಕಲಿಯೆಂಬುದನ್ನು ತಿಳಿಸುತ್ತದೆ.
ಇದೇ ಪಂಚಾಯತ್ ನಲ್ಲಿ ವ್ಯಾಪಾರದ ಲೈಸನ್ಸ್ ಕೂಡ ಮಧ್ಯವರ್ತಿಗಳು ನಕಲಿ ಮಾಡಿಕೊಡುತ್ತಾರೆ. ಕುತ್ತಾರು ರಾಜರಾಜೇಶ್ವರಿ ಭಜನಾಮಂದಿರದ ಬಳಿ ಇರುವ ಶೆಡ್‌ವೊಂದಕ್ಕೆ ನಕಲಿ ಲೈಸನ್ಸ್ ಸಿಕ್ಕಿದೆ. ಅದರಲ್ಲಿ ಮೆಕಾನಿಕ್ ಶಾಪ್ ಒಂದು ಅನಧಿಕೃತ ಶೆಡ್ ನಲ್ಲಿ ಮುನ್ನೂರು ಪಂಚಾಯತ್ ನ ನಕಲಿ ಲೈಸನ್ಸ್ ಪಡೆದು ಕಾರ್ಯಚರಿಸುತ್ತಿದೆ.
ಆ ಶೆಡ್ಡಿನ ಮಾಲಿಕ ಮಧ್ಯವರ್ತಿಗಳಿಗೆ ಲೈಸನ್ಸ್ ಮಾಡಲು ಹೇಳಿದ್ದರು. ಮಧ್ಯವರ್ತಿಗಳು ಲೈಸನ್ಸ್ ಪಡೆಯುವ ವೈಕ್ತಿಯ ಸಂಭಂದಿಕರ ಮನೆಯ ನಂಬರನ್ನು ಉಪಯೋಗಿಸಿ ಅನಧಿಕೃತ ಶೆಡ್‌ಗೆ ಲೈಸನ್ಸ್ ಮಾಡಿ ಹಣ ಪದೆದಿದ್ದರು.
ಮುನ್ನೂರು ಇದು ಯು.ಟಿ. ಖಾದರ್ ಕ್ಷೇತ್ರದಲ್ಲಿ ಬರುತ್ತದೆ ಇಲ್ಲಿ ಬಿಜೆಪಿ 10, ಕಾಂಗ್ರೆಸ್ಸ್ 10 ಮತ್ತು ಸಿಪಿಐಎಂ 3 ಸದಸ್ಯರ ಬಲವಿದೆ. ಮುನ್ನೂರು ಗ್ರಾಮ ಪಂಚಾಯತ್ ಆಡಳಿತ ಬಿಜೆಪಿ ಕೈಯಲ್ಲಿದೆ.
ಈ ಎಲ್ಲಾ ಕೃತ್ಯದ ಹಿಂದೆ ಮದನಿನಗರ ವಾರ್ಡಿನ ಸದಸ್ಯರೊಬ್ಬರು ತನ್ನ ಚೇಲಾಗಳ ಮೂಲಕ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಳ್ಳ ದಂದೆ ಮಾಡುತ್ತಿದ್ದಾರೆ ಎಂಬುದನ್ನು ಆಡಳಿತ ಪಕ್ಷದ ಕೆಲವು ಸದಸ್ಯರು ಹೇಳಿಕೊಳ್ಳುತ್ತಿದ್ದಾರೆ.
Click this button or press Ctrl+G to toggle between Kannada and English