ಬೆಂಗಳೂರು: ಈ ಹಿಂದೆ ನಲ್ಪಾಡ್ ಗ್ಯಾಂಗ್ನಿಂದ ನಡೆದಿದ್ದ ಹಲ್ಲೆ ಪ್ರಕರಣ ದೇಶಾದ್ಯಂತ ಸುದ್ದಿಯಾಗಿತ್ತು. ಇದೀಗ ಅಂತಹದ್ದೇ ಮತ್ತೊಂದು ಪ್ರಕರಣ ನಗರದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ನಿವೃತ್ತ ಅಧಿಕಾರಿವೋರ್ವರ ಮಗ ಸುಮನ್ ಎಂಬಾತ ಯುವರಾಜ್ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣ ನಡೆದು 24 ದಿನಗಳಾಗಿದ್ದರೂ ಪೊಲೀಸರು ಇನ್ನೂ ಆರೋಪಿಗಳನ್ನು ಬಂಧಿಸಿಲ್ಲ ಎನ್ನಲಾಗ್ತಿದೆ.
ಸೆ.8 ರಂದು ಯುವರಾಜ್ ಹೋಟೆಲ್ ಗೆ ಊಟಕ್ಕೆ ತೆರಳಿದ್ದ ವೇಳೆ ಕೈ ತೊಳೆದುಕೊಂಡು ಹೊರಡುವಾಗ ಯುವರಾಜ್ ಕೈ ಸುಮನ್ ಗೆ ತಗುಲಿತ್ತು. ಯಾಕೊ ನೋಡ್ಕೊಂಡ್ ಬರೋಕೆ ಆಗಲ್ವೇನೊ ಅಂತಾ ಯುವರಾಜ್ ಮೇಲೆ ಸುಮನ್ ಹಲ್ಲೆ ನಡೆಸಿದ್ದರು. ಸುಮನ್ ಮಾತ್ರವಲ್ಲದೆ ಆತನ ಜೊತೆಯಲ್ಲಿದ್ದ ಅಶೋಕ್ ಹರಿಕೃಷ್ಣ ಹಾಗೂ ವಿಕ್ರಮ ಚೋಳ್ ಎಂಬುವರು ಬಿಯರ್ ಬಾಟಲ್ನಿಂದ ಯುವರಾಜ್ ನ ಮೇಲೆ ಹಲ್ಲೆ ನಡೆಸಿದ್ದರು. ಆಗ ಯುವರಾಜ್ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ನಂತರ ಯುವರಾಜ್ ಸ್ನೇಹಿತರು ಆಸ್ಪತ್ರೆಗೆ ಸೇರಿಸಲು ಮುಂದದಾಗ ಆರೋಪಿಗಳು ಚಾಕು ತೋರಿಸಿ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದರು ಎಂದು ದೂರಲಾಗಿದೆ. ಯುವರಾಜ್ಗೆ ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಘಟನೆ ನಡೆದು 24 ದಿನಗಳಾಗಿದ್ದರೂ ಆರೋಪಿಗಳು ಪತ್ತೆಯಾಗಿಲ್ಲ. ಆರೋಪಿಗಳೆಲ್ಲ ಮುಂಬೈ, ಗೋವಾ ಹೀಗೆ ಸ್ಥಳಗಳನ್ನು ಬದಲಾಯಿಸುತ್ತಿದ್ದಾರೆ. ಹಲ್ಲೆ ನಡೆಸಿದ್ದು ನಿವೃತ್ತ ಅಧಿಕಾರಿ ಮಗ ಎಂಬ ಕಾರಣಕ್ಕೆ ಪೊಲೀಸರು ಅಸಡ್ಡೆ ತೋರುತ್ತಿದ್ದಾರೆ. ಪ್ರಕರಣದಲ್ಲಿ ರಾಜಕೀಯ ಒತ್ತಡವೂ ಇದೆ ಎಂಬ ಆರೋಪಗಳಿವೆ.
ಆರೋಪಿಗಳ ಪತ್ತೆಗಾಗಿ ಲುಕ್ ಔಟ್ ನೋಟೀಸ್ ಹೊರಡಿಸಿದ್ದು, ಘಟನೆಯ ಹಿಂದೆ ಬೇರೆಯದೇ ಕೈವಾಡಯಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಎಸಿಪಿ ಹಾಗು ಇನ್ಸ್‌ಪೆಕ್ಟರ್ ಮೇಲೆ ಆರೋಪಿಗಳನ್ನು ಬಂಧಿಸದಂತೆ ಒತ್ತಡ ಹೇರಲಾಗ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
Click this button or press Ctrl+G to toggle between Kannada and English