ಬಿಲ್ಡರ್ ಕಛೇರಿಯಲ್ಲಿ ಯುವತಿಗೆ ಲೈಂಗಿಕ ಕಿರುಕುಳ, ಆರೋಪಿ ಬಂಧನ

9:22 AM, Tuesday, October 9th, 2018
Share
1 Star2 Stars3 Stars4 Stars5 Stars
(No Ratings Yet)
Loading...

lathif-khaderಮಂಗಳೂರು :  ಕೋಟೆಕಾರ್ ಬೀರಿ ಹಿಂದೂಸ್ಥಾನ್ ಬಾವ ಬಿಲ್ಡರ್ ಕಛೇರಿಯಲ್ಲಿ ಅಕ್ಟೋಬರ್  8 ರಂದು  ಮದ್ಯಾಹ್ನ ಯುವತಿ ಒಬ್ಬರೇ  ಇದ್ದಾಗ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿತ ಅಬ್ದುಲ್ ಲತೀಪ್ ಖಾದರ್ ಕಛೇರಿಯೊಳಗೆ ಬಂದು ಪಿರ್ಯಾದಿದಾರರಿಗೆ ಲೈಂಗಿಕ ಕಿರುಕುಳ ನೀಡಿ, ಬೆದರಿಕೆ ಹಾಕಿ ತೊಂದರೆಪಡಿಸಿರರುವುದಾಗಿದ್ದು, ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ನಂಬ್ರ 200/2018 ಕಲಂ 341,354(ಎ), 354, 506 ಐಪಿಸಿ ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಬ್ದುಲ್ ಲತೀಪ್ ಖಾದರ್, ಪ್ರಾಯ 37 ವರ್ಷ, ತಂದೆ. ಖಾದರ್ ಬೈತುಲ್, ವಾಸ. ರೆಹಮತ್ ಮಂಜಿಲ್, ಉಪ್ಪಳಗೇಟ್, ಉಪ್ಪಳ, ಕಾಸರಗೋಡು, ಕೇರಳ ರಾಜ್ಯ ಎಂಬವರನ್ನು ದಿನಾಂಕ 08-10-2018 ರಂದು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English