ನವದೆಹಲಿ: ಉತ್ತರಪ್ರದೇಶ ಪೊಲೀಸ್ ಇಲಾಖೆಯಲ್ಲಿ ದೊಡ್ಡ ಇತಿಹಾಸವೇ ಸೃಷ್ಟಿಯಾಗಿದೆ. ಒಂದೇ ಬಾರಿಗೆ 25 ಸಾವಿರ ಕಾನ್ಸ್ಟೇಬಲ್ಸ್ಗಳಿಗೆ ಹೆಡ್ ಪಿಸಿಯಾಗಿ ಬಡ್ತಿ ನೀಡಿ ಆದೇಶ ಹೊರಡಿಸಿದೆ. ಈ ಮೂಲಕ ಮಾಸ್ ಪ್ರಮೋಷನ್ ನೀಡಿ ಹೊಸ ಇತಿಹಾಸವನ್ನೇ ಬರೆದಿದೆ.
ಇದು 25091 ಪೊಲೀಸ್ ಪೇದೆಗಳ ಮೊಗದಲ್ಲಿ ಸಂತಸ ಮೂಡಿಸಿದೆ. ಇದೇ ಖುಷಿಗೆ ಹೆಡ್ ಪಿಸಿಯಾಗಿ ಬಡ್ತಿ ಪಡೆದಿರುವವರು ಸ್ಪೀಟ್ ಹಂಚಿ ಸಂತಸ ಪಡುತ್ತಿದ್ದಾರೆ. ಇದು ಉತ್ತರ ಪ್ರದೇಶ ಇತಿಹಾಸದಲ್ಲಿ ಮೊದಲು ಎನ್ನಲಾಗುತ್ತಿದೆ.
ಈ ವಿಷಯವನ್ನ ಉತ್ತರಪ್ರದೇಶ ಪೊಲೀಸ್ ಇಲಾಖೆ ತನ್ನ ಅಧಿಕೃತ ಟ್ವಿಟ್ಟರ್ ಅಕೌಂಟ್ನಲ್ಲಿ ಟ್ವೀಟ್ ಮಾಡಿ ಖುಷಿ ಹಂಚಿಕೊಂಡಿದೆ. ಇದು ಇತಿಹಾಸದಲ್ಲೇ ಮೊದಲ ನಿರ್ಧಾರವಾಗಿದ್ದು, 25091 ಪೇದೆಗಳು ಬಡ್ತಿ ಪಡೆದಿದ್ದಾರೆ. ಇವತ್ತು ಅವರೆಲ್ಲ ಹೆಡ್ ಪಿಸಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅವರೆಲ್ಲರಿಗೂ ಅಭಿನಂದನೆ ಉತ್ತಮ ಕೆಲಸ ಮಾಡಲಿ ಒಳ್ಳೆಯದಾಗಲಿ ಎಂದು ಟ್ವೀಟ್ ಮಾಡಲಾಗಿದೆ.
2017 ರಲ್ಲಿ 8910 ಹಾಗೂ 2016 ರಲ್ಲಿ 15803 ಪೊಲೀಸರಿಗೆ ಬಡ್ತಿ ನೀಡಲಾಗಿತ್ತು. ಇದು ಇದುವರೆಗಿನ ಅತಿದೊಡ್ಡ ಪ್ರಮೋಷನ್ ಎಂದು ದಾಖಲಾಗಿತ್ತು.
Click this button or press Ctrl+G to toggle between Kannada and English