ವಿಟ್ಲ : ಮಾಣಿಲ ಶ್ರೀ ಮಹಾಲಕ್ಷ್ಮೀ ಧಾಮದಲ್ಲಿ ಅಕ್ಟೋಬರ್ 9ರಿಂದ ಅಕ್ಟೋಬರ್ 21ರ ವರೆಗೆ ನಡೆಯಲಿರುವ ಶರನ್ನವರಾತ್ರಿ ಮಹೋತ್ಸವದ ಕೊಪ್ಪರಿಗೆ ಮುಹೂರ್ತ ಸಮಾರಂಭ ಅಕ್ಟೋಬರ್ 9 ರಂದು ಬೆಳಿಗ್ಗೆ ಶ್ರೀ ಕ್ಷೇತ್ರದಲ್ಲಿ ನಡೆಯಿತು.
ಈ ಸಂದರ್ಭ ಟ್ರಸ್ಟಿಗಳಾದ ರಮೇಶ್ ಪಣೋಳಿ ಬೈಲು, ಚಂದ್ರಶೇಖರ್ ತುಂಬೆ, ಆಶೋಕ್ ರೈ ಅರ್ಪೀನಿ ಗುತ್ತು, ಮಂಜು ವಿಟ್ಲ, ಜಯರಾಜ್ ಪ್ರಕಾಶ್, ರಾಧಾಕೃಷ್ಣ ಚೆಲ್ಲಡ್ಕ, ಶ್ರೀ ಧಾಮ ಮಿತ್ರ ವೃಂದ ಮತ್ತು ಶ್ರೀ ಧಾಮ ಮಹಿಳಾ ಸೇವಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರದಲ್ಲಿ 10 ದಿನಗಳ ಕಾಲ ಶ್ರೀಶ್ರೀ ಮೋಹನದಾಸ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ವೇದಮೂರ್ತಿ ನಯನಕೃಷ್ಣ ಜಾಲ್ಸೂರು ಇವರ ವೈದಿಕತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಅಕ್ಟೋಬರ್ 13 ಶನಿವಾರ ದಂದು ಲಲಿತಾ ಪಂಚಮಿ ಪೂಜೆ, ಲಲಿತಾ ಯಾಗ. ರಾತ್ರಿ ಘಂಟೆ 8.00ರಿಂದ ಶಾರದಾ ಆರ್ಟ್ಸ್ ಕಲಾವಿದೆರ್ ಮಂಜೇಶ್ವರ ಇವರಿಂದ ತುಳು ಹಾಸ್ಯ ನಾಟಕ ‘ತಿರ್ಗ್‌ದ್ ತೂಲೆ’. ಅಕ್ಟೋಬರ್ 15 ಸೋಮವಾರದಂದು ಶಾರದಾ ಪೂಜಾರಂಭ, ಸರಸ್ವತೀ ಯಾಗ, ಅಕ್ಟೋಬರ್ 16 ಮಂಗಳವಾರ ರಾತ್ರಿ ಘಂಟೆ 8 ರಿಂದ ಶ್ರೀ ಪಂಚಲಿಂಗೇಶ್ವರ ಯಕ್ಷ ಕಲಾ ವೃಂದ, ಬಾಯಾರು ಇವರಿಂದ ಯಕ್ಷಗಾನ `ಮೋಕ್ಷ ಸಂಗ್ರಾಮ’, ಅಕ್ಟೋಬರ್ 18, ಗುರುವಾರ ಮಹಾನವಮಿ, ಆಯುಧ ಪೂಜೆ, ಅಕ್ಟೋಬರ್ 20 ಶಿವಾರ ಮಧುಕರಿ ಕಾರ್ಯಕ್ರಮ ನಡೆಯಲಿದೆ.
Click this button or press Ctrl+G to toggle between Kannada and English