ಉಡುಪಿ : ಉಡುಪಿಯ ನೂತನ ಎಸ್ಪಿಯಾಗಿ ಡಾ|ಎಂ.ಬಿ. ಬೋರಲಿಂಗಯ್ಯ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ಹಿಂದಿನ ಎಸ್ಪಿ ಡಾ|ರವಿಕುಮಾರ್ ಅವರು ದಾರವಾಡಕ್ಕೆ ವರ್ಗಾವಣೆಗೊಂಡಿದ್ದಾರೆ.
ಹೆಚ್ಚುವರಿ ಎಸ್ಪಿ ವೆಂಕಟೇಶಪ್ಪ ಅವರಿಂದ ಅಧಿಕಾರ ಸ್ವೀಕರಿಸಿದ ಬಳಿಕ ಡಾ|ಎಂ.ಬಿ. ಬೋರಲಿಂಗಯ್ಯ ಅವರು, ಸಾಮಾನ್ಯವಾಗಿ ಕರಾವಳಿ ಜಿಲ್ಲೆಯ ಕೋಮು ಸೂಕ್ಷ್ಮ ಪರಿಸ್ಥಿತಿ, ಗಡಿ ಭಾಗದಲ್ಲಿರುವ ನಕ್ಸಲ್ ಸಮಸ್ಯೆಗಳ ಪರಿಹಾರಕ್ಕೆ ಬಗ್ಗೆ ಹೆಚ್ಚಿನ ಗಮನ ನೀಡಲಾಗುವುದು, ಅಲ್ಲದೆ ಮುಂದೆ ಬರುವ ಉಪಚುನಾವಣೆಯ ಭದ್ರತೆಯನ್ನು ಸಮರ್ಥವಾಗಿ ನಿರ್ವಹಿಸುವುದಾಗಿ ಪತ್ರಕರ್ತರಿಗೆ ತಿಳಿಸಿದರು.
ಮೂಲತಃ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಮಲ್ಲನಾಯಕನಹಳ್ಳಿಯ ಬೋರಲಿಂಗಯ್ಯ ಅವರು ಎಂಬಿಬಿಎಸ್ ಪದವೀಧರ ವೈದ್ಯರು. 2008ರ ಐಪಿಎಸ್ ತಂಡದ ಬೋರಲಿಂಗಯ್ಯ ಅವರು ಗುಲ್ಬರ್ಗ ಜಿಲ್ಲೆಯಲ್ಲಿ ತರಬೇತಿ ಪಡೆದು ತುಮಕೂರು ಜಿಲ್ಲೆ ತಿಪಟೂರು ಉಪವಿಭಾಗದಲ್ಲಿ ಎಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಇದೀಗ ಪ್ರಥಮ ಬಾರಿ ಎಸ್ಪಿಯಾಗಿ ನೇಮಕಗೊಂಡಿದ್ದಾರೆ.
Click this button or press Ctrl+G to toggle between Kannada and English