ಮಂಗಳೂರು: ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ಮೆಸ್ಕಾಂ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಸ್ನೇಹಲ್ ರಾಯ ಮನೆ ಮಂಗಳವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಮೆಸ್ಕಾಂ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆಯೊಬ್ಬರು ಪೂರ್ಣಪ್ರಮಾಣದಲ್ಲಿ ಈ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ ಮೂಲತಃ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯವರಾದ ಅವರು, 2013 ನೇ ಬ್ಯಾಚ್ ನ ಐಎಸ್ ಅಧಿಕಾರಿ. 2015 ರಲ್ಲಿ ಚಿಕ್ಕಮಗಳೂರು ಸಹಾಯಕ ಆಯುಕ್ತರಾದ ಕಾರ್ಯ ಆರಂಭಿಸಿ ಧಾರವಾಡ ಜಿ . ಪಂ . ಸಿಇಒ ಆಗಿದ್ದರು.
ಇದೊಂದು ಸಾರ್ವಜನಿಕ ಹುದ್ದೆ, ನನಗೆ ಕೊಟ್ಟಿರುವ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿ ಜನರಿಗೆ ಉತ್ತಮ ಸೇವೆ ಒದಗಿಸುವುದು ನಮ್ಮ ಕರ್ತವ್ಯ. ಹೊಸದಾಗಿ ಏನಾದರು ಬದಲಾವಣೆ ಮಾಡಲು ಸಾದ್ಯವಾಗುವುದ್ದಿದರೆ ಖಂಡಿತ ಮಾಡುವೆ. ಜನರ ಉತ್ತಮ ಸಲಹೆಗಳನ್ನು ಜಾರಿಗೊಳಿಸುವೆ. ಮೆಸ್ಕಾಂ ನ ಜನ ಸಂಪರ್ಕ ಸಭೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವೆ. ಜನರಿಗೆ ಯಾವುದೇ ಅಡಚಣೆ ಇಲ್ಲದೆ ನಿರಂತರ ವಿದ್ಯುತ್ ಕೊಡಲು ನಮ್ಮ ಮೊದಲ ಆದ್ಯತೆ. ಅದರ ಜೊತೆಗೆ, ಈ ನಷ್ಟ ಸರಿದೊಗಿಸಲು ಹೇಗೆ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸಬಹುದು ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವೆ ಎಂದು ಹೇಳಿದ್ದಾರೆ.
Click this button or press Ctrl+G to toggle between Kannada and English